ADVERTISEMENT

Covid-19 Karnataka Update| ತಗ್ಗಿದ ಕೊರೊನಾ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 14:22 IST
Last Updated 3 ಆಗಸ್ಟ್ 2020, 14:22 IST
ಕೋವಿಡ್‌ ಪತ್ತೆ ಪರೀಕ್ಷೆಯ ಪ್ರಾತಿನಿಧಿಕ ಚಿತ್ರ
ಕೋವಿಡ್‌ ಪತ್ತೆ ಪರೀಕ್ಷೆಯ ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕಳೆದ ಹಲವು ದಿನಗಳಿಂದ ದಿನವೊಂದರಲ್ಲಿ 5 ಸಾವಿರ ಮೀರಿದ ಪ್ರಕರಣಗಳನ್ನು ನೋಡುತ್ತಿದ್ದ ಕರ್ನಾಟಕದಲ್ಲಿ ಸೋಮವಾರ 4752 ಪ್ರಕರಣಗಳು ಕಂಡು ಬಂದಿವೆ.

ರಾಜ್ಯದಲ್ಲಿ ಸೋಮವಾರ 4776 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ. ಸೋಂಕು ದೃಢಪಟ್ಟಿವರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ.

ಈ ಮಧ್ಯೆ, ಕಳೆದ 24 ಗಂಟೆಗಳಲ್ಲಿ 98 ಕೋವಿಡ್ ಪೀಡಿತರು ಮರಣ ಹೊಂದಿದ್ದಾರೆ. ಈ ಮೂಲಕ ಈ ವರೆಗಿನ ಸಾವಿನ ಸಂಖ್ಯೆ 2595ಕ್ಕೆ ಏರಿದೆ.

ADVERTISEMENT

ಅಲ್ಲದೆ, ಸೋಮವಾರದ ಹೊತ್ತಿಗೆ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 13,9571 ಕ್ಕೆ ಮುಟ್ಟಿದೆ.

ಬೆಂಗಳೂರಿನಲ್ಲಿ ಸೋಮವಾರ 1497 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 60,998ಕ್ಕೆ ಏರಿದೆ.

ಭಾನುವಾರ ಒಂದೇ ದಿನ ರಾಜ್ಯದಲ್ಲಿ5,532 ಪ್ರಕರಣಗಳು ಪತ್ತೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.