ADVERTISEMENT

Covid-19 Karnataka Update | ಒಂದೇ ದಿನ 248 ಹೊಸ ಪ್ರಕರಣ, ಮೃತರ ಸಂಖ್ಯೆ 48

​ಪ್ರಜಾವಾಣಿ ವಾರ್ತೆ
Published 29 ಮೇ 2020, 12:33 IST
Last Updated 29 ಮೇ 2020, 12:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮೇ 28ರ ಸಂಜೆ 5ಗಂಟೆಯಿಂದ ಮೇ 29ರ ಸಂಜೆ 5 ಗಂಟೆವರೆಗೆ ಹೊಸ 248 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇದರೊಂದಿಗೆ ರಾಜ್ಯದಲ್ಲಿ 2,781 ಮಂದಿಗೆ ಸೋಂಕು ತಗುಲಿದ್ದು, ಇದುವರೆಗೂ 48 ಮಂದಿ ಮೃತಪಟ್ಟಿದ್ದಾರೆ.

ಈವರೆಗೆ 894 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,837 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.

ADVERTISEMENT

ಇಂದು ಬೆಂಗಳೂರು ನಗರದಲ್ಲಿ 12, ಮಂಡ್ಯ 02, ಕಲಬುರಗಿ 61, ಯಾದಗಿರಿ 60, ದಾವಣಗೆರೆ 04, ಉಡುಪಿ 15, ಹಾಸನ 04, ಚಿಕ್ಕಬಳ್ಳಾಪುರ 5, ರಾಯಚೂರು 62, ಮೈಸೂರು 02, ವಿಜಯಪುರ 04, ಬಳ್ಳಾರಿ 09, ಧಾರವಾಡ 01, ಚಿತ್ರದುರ್ಗ 01, ಶಿವಮೊಗ್ಗ 01, ತುಮಕೂರು 02, ಚಿಕ್ಕಮಗಳೂರು 02 ಮತ್ತು ಬೆಂಗಳೂರು ಗ್ರಾಮಾಂತರ 01 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.