ADVERTISEMENT

ಪಿಲಿಕುಳದಲ್ಲಿ ನಿಸರ್ಗಧಾಮದಲ್ಲಿ ಆತಂಕ ಇಲ್ಲ: ಮುನ್ನೆಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 11:40 IST
Last Updated 6 ಏಪ್ರಿಲ್ 2020, 11:40 IST
   

ಮಂಗಳೂರು: ಅಮೆರಿಕದ ಮೃಗಾಲಯವೊಂದರ ಹುಲಿಯೊಂದಕ್ಕೆ ಕೊರೊನಾ ಸೋಂಕು ತಗುಲಿದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲ್ಲಿನ ಪಿಲಿಕುಳ ನಿಸರ್ಗಧಾಮದ ಪ್ರಾಣಿ ಸಂಗ್ರಹಾಲಯದಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದೆ.

ಸಿಬ್ಬಂದಿಗೆ ಕೋವಿಡ್-19 ಸ್ವಚ್ಚತಾ ಕ್ರಮಗಳನ್ನು ಇನ್ನಷ್ಟು ಕಠಿಣಗೊಳಿಸಲು ಪ್ರಾಣಿ ಸಂಗ್ರಹಾಲಯವು ಕ್ರಮಕೈಗೊಂಡಿದೆ.

ಅಲ್ಲದೇ, ಪ್ರಾಣಿ, ಪಕ್ಷಿ ಸಂಕುಲವನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪ್ರಾಣಿಸಂಗ್ರಹಾಲಯದ ಪಶುವೈದ್ಯಕೀಯ ವೈದ್ಯರು ಹಾಗೂ ಸಿಬ್ಬಂದಿ ಪ್ರತಿನಿತ್ಯ ತಪಾಸಣೆ ನಡೆಸುತ್ತಿದ್ದಾರೆ.

ADVERTISEMENT

ಆಹಾರ ಸಮಸ್ಯೆ

ಲಾಕ್‌ಡೌನ್‌ ಪರಿಣಾಮ ಪ್ರಾಣಿಗಳಿಗೆ ಆಹಾರ ಪೂರೈಕೆಯ ಸಮಸ್ಯೆ ಉಂಟಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಈ ಪೈಕಿ ಕೆಂಪು ಮಾಂಸದ ಕೊರತೆ ಪರಿಣಾಮ ಹುಲಿ, ಸಿಂಹ ಮತ್ತಿತರ ಪ್ರಾಣಿಗಳು ಹಾಗೂ ಕೆಲವು ಮಾರ್ಜಾಲ ವರ್ಗದ ಪ್ರಾಣಿಗಳು ಮತ್ತು ಮಾಂಸಾಹಾರಿ ಪಕ್ಷಿಗಳಿಗೆ ಕೋಳಿ ನೀಡಲಾಗುತ್ತಿದೆ.

'ನಮ್ಮಲ್ಲಿ ಕೊರೊನಾ ಸೇರಿದಂತೆ ಯಾವುದೇ ರೋಗಗಳ ಸೋಂಕು ಕಂಡು ಬಂದಿಲ್ಲ. ಆದರೂ ತೀವ್ರ ನಿಗಾ ಇಟ್ಟಿದ್ದೇವೆ. ಕೆಲವು ಪ್ರಾಣಿ - ಪಕ್ಷಿಗಳ ಬದಲಾಯಿಸಲಾದ ಆಹಾರದ ಬಗ್ಗೆಯೂ ಎಚ್ಚರ ವಹಿಸಿದ್ದೇವೆ ' ಎಂದು ಪಿಲಿಕುಳ ನಿಸರ್ಗಧಾಮ ದ ನಿರ್ದೇಶಕ ಜಯ ಪ್ರಕಾಶ ಭಂಡಾರಿ ಪ್ರಜಾವಾಣಿ ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.