ADVERTISEMENT

ಕೋವಿಡ್: ಐದೂವರೆ ತಿಂಗಳಲ್ಲಿ ಕನಿಷ್ಠ ಮರಣ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 16:23 IST
Last Updated 9 ಸೆಪ್ಟೆಂಬರ್ 2021, 16:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕಿತರಲ್ಲಿ ಬೆಂಗಳೂರಿನಲ್ಲಿ ಮೂರು ಸೇರಿದಂತೆ ರಾಜ್ಯದಲ್ಲಿ ನಾಲ್ವರು ಮೃತಪಟ್ಟಿರುವುದು ಗುರುವಾರ ದೃಢಪಟ್ಟಿದೆ. ಇವು ಐದೂವರೆ ತಿಂಗಳ ಅವಧಿಯಲ್ಲಿ ವರದಿಯಾದಕನಿಷ್ಠಮರಣಪ್ರಕರಣಗಳು.

ರಾಜ್ಯದಲ್ಲಿ ಮಾರ್ಚ್‌ ಕೊನೆಯ ವಾರದ ಬಳಿಕಮರಣಪ್ರಕರಣಗಳ ಸಂಖ್ಯೆ ಏರಿಕೆ ಕಂಡು, ಬಳಿಕ 500ರ ಗಡಿ ತಲುಪಿತ್ತು. ಜುಲೈನಿಂದ ಈ ಸಂಖ್ಯೆ ಇಳಿಮುಖಮಾಡಿದೆ.ಮರಣಪ್ರಮಾಣ ದರವು ಶೇ 0.37ರಷ್ಟು ವರದಿಯಾಗಿದೆ. ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 37,462ಕ್ಕೆ ತಲುಪಿದೆ.

ಹೊಸದಾಗಿ 1,074 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ.ಈವರೆಗೆ ವರದಿಯಾದಕೋವಿಡ್‌ ಪ್ರಕರಣಗಳ ಒಟ್ಟು ಸಂಖ್ಯೆ 29.59 ಲಕ್ಷ ದಾಟಿದೆ.ಒಂದು ದಿನದ ಅವಧಿಯಲ್ಲಿ 1.69 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ‌ಸೋಂಕು ದೃಢ ಪ್ರಮಾಣವು ಶೇ 0.63 ರಷ್ಟು ವರದಿಯಾಗಿದೆ. 9 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ, 13 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ. ಬಾಗಲಕೋಟೆ, ಬೀದರ್, ಹಾವೇರಿ, ಗದಗ ಹಾಗೂ ಕೊಪ್ಪಳದಲ್ಲಿ ಹೊಸಪ್ರಕರಣವರದಿಯಾಗಿಲ್ಲ.

ADVERTISEMENT

ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡದಲ್ಲಿ 176, ಕೊಡಗಿನಲ್ಲಿ 59 ಹಾಗೂಮೈಸೂರಿನಲ್ಲಿ 48 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 343 ಮಂದಿ ಹಾಗೂ ಉಡುಪಿಯಲ್ಲಿ 126 ಮಂದಿ ಸೋಂಕಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೊಸ ‍ಪ್ರಕರಣಗಳು 100ರ ಗಡಿಯೊಳಗೆ ಇವೆ.

ರಾಜ್ಯದಲ್ಲಿ ಕೋವಿಡ್ಸಕ್ರಿಯಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದ್ದು, ಸದ್ಯ 16,992 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ಸೋಂಕಿತರಲ್ಲಿ 1,136 ಮಂದಿ ಚೇತರಿಸಿಕೊಂಡಿದ್ದಾರೆ. ಗುಣಮುಖರಾದವರ ಒಟ್ಟು ಸಂಖ್ಯೆ 29.04 ಲಕ್ಷ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.