ADVERTISEMENT

Covid Karnataka Update| ಇಂದು 9,366 ಸೋಂಕು ಪ್ರಕರಣಗಳು ಪತ್ತೆ, 93 ಸಾವು

ಹೊಸದಾಗಿ 9,366 ಪ್ರಕರಣಗಳು ಪತ್ತೆ l ಮೃತರ ಸಂಖ್ಯೆ 7,629ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 16:18 IST
Last Updated 17 ಸೆಪ್ಟೆಂಬರ್ 2020, 16:18 IST
ಪ್ರತಿನಿಧಿಕ ಚಿತ್ರ
ಪ್ರತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯದಲ್ಲಿ ಮತ್ತೆ 9,366ಮಂದಿಕೋವಿಡ್ಪೀಡಿತರಾಗಿರುವುದು ಗುರುವಾರ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ
ಸಂಖ್ಯೆ5ಲಕ್ಷದತ್ತ(4.94 ಲಕ್ಷ) ದಾಪುಗಾಲು ಇರಿಸಿದೆ.

ರಾಜ್ಯದಲ್ಲಿ ಮೊದಲ ಕೋವಿಡ್ ಪ್ರಕರಣ ಮಾ.8 ರಂದು ವರದಿಯಾಗಿತ್ತು. ಬಳಿಕ ಪ್ರಕರಣಗಳಸಂಖ್ಯೆ1 ಲಕ್ಷದ ಗಡಿ ತಲುಪಲು 108 ದಿನ ಹಿಡಿದಿತ್ತು. ನಂತರದ ದಿನಗಳಲ್ಲಿ ಸೋಂಕಿತರ ಸಂಖ್ಯೆ ಏರುಗತಿ ಪಡೆದಿದ್ದರಿಂದ ಕೇವಲ 20 ದಿನಗಳಲ್ಲಿಯೇ ಮತ್ತೊಂದು ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಅಂದರೆ, ಜುಲೈ 13ಕ್ಕೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ದಾಟಿತ್ತು. ಆ.26ಕ್ಕೆ ಸೋಂಕಿತರ ಸಂಖ್ಯೆ 3 ಲಕ್ಷ ತಲುಪಿತ್ತು. ಬಳಿಕ 12 ದಿನಗಳಲ್ಲಿ ಮತ್ತೆ ಒಂದು ಲಕ್ಷ ಪ್ರಕರಣ ವರದಿಯಾಗಿ, ಸೋಂಕಿತರ ಸಂಖ್ಯೆ 4 ಲಕ್ಷಕ್ಕೆ (ಸೆ.7) ಏರಿಕೆಯಾಗಿತ್ತು.ಮುಂದಿನ 94 ಸಾವಿರಪ್ರಕರಣಗಳು 10 ದಿನಗಳಲ್ಲಿ ವರದಿಯಾಗಿವೆ.

ಈ ತಿಂಗಳ 17 ದಿನಗಳಲ್ಲಿ 1.51 ಲಕ್ಷ ಮಂದಿ ಸೋಂಕಿತರಾಗಿದ್ದಾರೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 8,903 ಮಂದಿ ಕೋವಿಡ್‌ ಪೀಡಿತರಾಗಿರುವುದು ದೃಢಪಟ್ಟಿದೆ. ಕೊರೊನಾ ಸೋಂಕಿತರಲ್ಲಿ ಮತ್ತೆ 93 ಮಂದಿ ಮೃತಪಟ್ಟಿದ್ದು, ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 7,629ಕ್ಕೆ ಏರಿಕೆಯಾಗಿದೆ.ಒಂದೇ ದಿನ 72,030 ಮಂದಿಗೆ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡವರ ಸಂಖ್ಯೆ 40 ಲಕ್ಷದ ಗಡಿ ದಾಟಿದೆ. ಸೋಂಕಿತರಲ್ಲಿ ಬೆಂಗಳೂರಿನಲ್ಲಿ 2,184 ಮಂದಿ ಸೇರಿದಂತೆ ರಾಜ್ಯದಲ್ಲಿ 7,268 ಮಂದಿಗೆ ಕಾಯಿಲೆ ವಾಸಿಯಾಗಿದೆ. ರಾಜ್ಯದಲ್ಲಿ ಈವರೆಗೆ ಗುಣಮುಖರಾದವರ ಸಂಖ್ಯೆ 3.83 ಲಕ್ಷಕ್ಕೆ ಮುಟ್ಟಿದೆ.

ADVERTISEMENT

ಬೆಂಗಳೂರಿನಲ್ಲಿ ಹೊಸದಾಗಿ 3,799 ಕೋವಿಡ್ ಪ್ರಕರಣಗಳು ವರದಿ ಯಾಗಿದ್ದು, ಸೋಂಕಿತರ ಸಂಖ್ಯೆ 1.84ಲಕ್ಷ ದಾಟಿದೆ.ಬಳ್ಳಾರಿಯಲ್ಲಿ ಹೊಸದಾಗಿ 677 ಪ್ರಕರಣಗಳು ವರದಿಯಾಗಿವೆ. ಮೈಸೂರಿನಲ್ಲಿ ಮತ್ತೆ 591 ಮಂದಿ ಕೋವಿಡ್‌ ಪೀಡಿತರಾಗಿದ್ದಾರೆ. ಅಲ್ಲಿಒಟ್ಟು ಸೋಂಕಿತರ ಸಂಖ್ಯೆ 28 ಸಾವಿರ
ದಾಟಿದೆ. ತುಮಕೂರು (381), ದಕ್ಷಿಣ ಕನ್ನಡ (308), ಬೆಳಗಾವಿ (295)ಜಿಲ್ಲೆ ಯಲ್ಲಿಯೂ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.