ADVERTISEMENT

Covid-19 Karnataka Update: 8,778 ಹೊಸ ಪ್ರಕರಣ, 67 ಮಂದಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಏಪ್ರಿಲ್ 2021, 15:06 IST
Last Updated 13 ಏಪ್ರಿಲ್ 2021, 15:06 IST
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 8,778 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 67 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 10,83,647ಕ್ಕೆ ಏರಿಕೆಯಾಗಿದೆ. ಆ ಪೈಕಿ 13,008 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ.

ಇಂದು 6,079 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಗುಣಮುಖರಾದವರ ಸಂಖ್ಯೆ 9,92,003ಕ್ಕೆ ತಲುಪಿದೆ. ಸದ್ಯ ರಾಜ್ಯದಲ್ಲಿ 78,617 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಬೆಂಗಳೂರಿನಲ್ಲಿ ಇಂದು ಹೊಸದಾಗಿ 5,500 ಪ್ರಕರಣಗಳು ಪತ್ತೆಯಾಗಿದ್ದು, ಒಂದು ವರ್ಷದಿಂದೀಚೆಗೆ ಕೊರೊನಾ ಸೋಂಕಿತರಾದವರ ಸಂಖ್ಯೆ 5 ಲಕ್ಷದತ್ತ ಸಾಗಿದೆ.

ಮೈಸೂರು 492, ತುಮಕೂರು 350, ಕಲಬುರಗಿ 290, ಬೀದರ್‌ 198, ಬಳ್ಳಾರಿ 168, ಹಾಸನ 150, ದಕ್ಷಿಣ ಕನ್ನಡ 142, ಧಾರವಾಡ 132, ಚಿಕ್ಕಬಳ್ಳಾಪುರ 114, ಮಂಡ್ಯ 114, ವಿಜಯಪುರ ಜಿಲ್ಲೆಯಲ್ಲಿ 105 ಹೊಸ ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.