ADVERTISEMENT

ಕೋವಿಡ್‌–19: ರಾಜ್ಯದಲ್ಲಿ ಸೋಂಕು ಪ್ರಕರಣಗಳು 247ಕ್ಕೆ ಏರಿಕೆ, 15 ಹೊಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 7:31 IST
Last Updated 13 ಏಪ್ರಿಲ್ 2020, 7:31 IST
ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣಗಳು
ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣಗಳು    

ಬೆಂಗಳೂರು: ಭಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನದವರೆಗೂ ರಾಜ್ಯದಲ್ಲಿ ಕೋವಿಡ್‌–19 ದೃಢಪಟ್ಟಿರುವ 15 ಹೊಸ ಪ್ರಕರಣಗಳು ವರದಿಯಾಗಿವೆ.

ಹುಬ್ಬಳ್ಳಿಯ ನಾಲ್ವರು, ಮಳವಳ್ಳಿಯ ಮೂರು ಮಂದಿ, ಬೀದರ್‌ನ ಇಬ್ಬರು, ಬೆಳಗಾವಿ ರಾಯಭಾಗದ ಮೂವರು ಹಾಗೂ ದೊಡ್ಡಬಳ್ಳಾಪುರ, ಬೆಂಗಳೂರು ನಗರ, ಬಾಗಲಕೋಟೆಯ ಮುಧೋಳ್‌ನ ತಲಾ ಒಬ್ಬ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ವೈರಸ್‌ ಸೋಂಕು ಪ್ರಕರಣಗಳು 247ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಈವರೆಗೂ 6 ಮಂದಿ ಸಾವಿಗೀಡಾಗಿದ್ದು, 59 ಮಂದಿ ಗುಣಮುಖರಾಗಿದ್ದಾರೆ.

ADVERTISEMENT
ಕರ್ನಾಟಕ–247
ಬೆಂಗಳೂರು 77
ಮೈಸೂರು 48
ಚಿಕ್ಕಬಳ್ಳಾಪುರ 09
ದಕ್ಷಿಣ ಕನ್ನಡ 12
ಕಲಬುರ್ಗಿ 13
ದಾವಣಗೆರೆ 03
ಉಡುಪಿ 03
ಬಳ್ಳಾರಿ 06
ತುಮಕೂರು 01
ಕೊಡಗು 01
ಧಾರವಾಡ 06
ಬೀದರ್‌ 13
ಬಾಗಲಕೋಟೆ 09
ಬೆಳಗಾವಿ 17
ಬೆಂಗಳೂರು ಗ್ರಾಮಾಂತರ 05
ಗದಗ 01
ಮಂಡ್ಯ 08
ಉತ್ತರ ಕನ್ನಡ 09

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.