ADVERTISEMENT

ಗೋಹತ್ಯೆ ನಿಷೇಧಿಸುವಂತೆ ಗಾಂಧಿ ಹೇಳಿದ ಮಾತು ನೆನಪಾಗಲಿಲ್ಲವೆ: ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2022, 10:08 IST
Last Updated 2 ಅಕ್ಟೋಬರ್ 2022, 10:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಗೋಹತ್ಯೆ ಪ್ರೋತ್ಸಾಹಿಸಿದಾಗ ಮಹಾತ್ಮ ಗಾಂಧಿಯವರು ಹೇಳಿದ ಮಾತು ನಿಮಗೆ (ಕಾಂಗ್ರೆಸ್) ನೆನಪಾಗಲಿಲ್ಲವೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಗಾಂಧಿ ಜಯಂತಿ ಆಚರಣೆ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್, ಓಲೈಕೆ ರಾಜಕಾರಣಕ್ಕಾಗಿ ಗೋಹತ್ಯೆ ಪ್ರೋತ್ಸಾಹಿಸುವಾಗ, ಗೋ ಹತ್ಯೆ ನಿಷೇಧಿಸಲು ಹೇಳಿದ ಮಹಾತ್ಮ ಗಾಂಧಿಯವರ ಮಾತು ನಿಮಗೆ ನೆನಪಾಗಲಿಲ್ಲ. ಕಾಂಗ್ರೆಸ್ಸಿಗರೆ, ಈಗ ಯಾವ ನೈತಿಕತೆಯಿಂದ ನೀವು ಗಾಂಧಿ ಜಯಂತಿ ಆಚರಿಸುತ್ತಿದ್ದೀರಿ’ ಎಂದು ಪ್ರಶ್ನಿಸಿದೆ.

‘ಸ್ವಾತಂತ್ರ್ಯ ದೊರಕಿತು. ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇಲ್ಲ. ಅದನ್ನು ವಿಸರ್ಜಿಸಿ ಎಂದು ಹೇಳಿದ ಮಹಾತ್ಮ ಗಾಂಧಿಯವರ ಮಾತನ್ನು ಧಿಕ್ಕರಿಸಿದ ನಕಲಿ ಗಾಂಧಿಗಳು, ಇವತ್ತು ಯಾವ ನೈತಿಕತೆಯಿಂದ ಗಾಂಧಿ ಜಯಂತಿ ಆಚರಿಸುತ್ತಿದ್ದೀರಿ?’ ಎಂದು ಬಿಜೆಪಿ ಟೀಕಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.