ಬೆಂಗಳೂರು: ನಾರಾಯಣಗುರು ಅವರ ಸ್ತಬ್ಧ ಚಿತ್ರ ವಿಚಾರದಲ್ಲಿ ಕೇರಳ ಮಾಡಿರುವ ತಪ್ಪಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಬೇಕಿರುವುದು ಕೇರಳದ ಸಿಪಿಐಎಂ ಪಕ್ಷವನ್ನೇ ಹೊರತು ಕೇಂದ್ರವನ್ನಲ್ಲ ಎಂದು ಬಿಜೆಪಿ ಹೇಳಿದೆ.
ಸ್ತಬ್ಧ ಚಿತ್ರದ ವಿಚಾರದಲ್ಲಿ ಕೇಂದ್ರ ಸರ್ಕಾರ ಸೂಕ್ತ ಮಾರ್ಗದರ್ಶಿ ಸೂತ್ರವನ್ನು ಕೇರಳ ಸರ್ಕಾರಕ್ಕೆ ಕಳುಹಿಸಿತ್ತು. ಈ ಶಿಷ್ಟಾಚಾರವನ್ನು ಉಲ್ಲಂಘಿಸಿದ ಕೇರಳ ಸರ್ಕಾರದ ರಾಜಕೀಯ ಕುತಂತ್ರದಿಂದ ವಿವಾದ ಸೃಷ್ಟಿಯಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಮೊಸರಿನಲ್ಲೂ ಕಲ್ಲು ಹುಡುಕುವ ಜಾಯಮಾನ ಇಬ್ಬರೂ ಮಾಜಿಮುಖ್ಯಮಂತ್ರಿಗಳಿಗೆ ಹೊಸತೇನಲ್ಲ. ಆದರೂ ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಇವರು ಸತ್ಯದ ಪರವಾಗಿ ನಿಲ್ಲುವವರಾದರೆ ಈ ವಿಚಾರದಲ್ಲಿ ಮೋದಿಯವರನ್ನು ಬೆಂಬಲಿಸಬೇಕಲ್ಲವೇ?
ನಾರಾಯಣ ಗುರುಗಳ ವಿಚಾರದಲ್ಲಿ ಪ್ರಧಾನಿ ಮೋದಿ ಅಪಾರ ಗೌರವ ಹೊಂದಿದ್ದಾರೆ. ಶ್ರೀಗಳ ಐಕ್ಯ ಸ್ಥಳಕ್ಕೂ ಭೇಟಿ ನೀಡಿದ್ದಾರೆ. ನಾರಾಯಣ ಗುರುಗಳ ಸಾಧನೆಯನ್ನು ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಮಹಾನ್ ದಾರ್ಶನಿಕನ ಬಗ್ಗೆ ಪ್ರಧಾನಿ ಹೊಂದಿರುವ ಗೌರವ ಪ್ರಶ್ನಿಸುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರದು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.