ಕಮಲಮ್ಮ
ಬೆಂಗಳೂರು: ಕನ್ನಡ ಚಳವಳಿಯ ಕಟ್ಟಾಳು, ಕನ್ನಡ ಬಾವುಟ ಸೃಷ್ಟಿಸಿದ್ದ ಮ. ರಾಮಮೂರ್ತಿ ಅವರ ಪತ್ನಿ ಕಮಲಮ್ಮ ರಾಮಮೂರ್ತಿ(100) ಸೋಮವಾರ ನಿಧನರಾದರು.
ಪತಿ ರಾಮಾಮೂರ್ತಿ ಮತ್ತು ಮಕ್ಕಳಾದ ದಿವಾಕರ ಮತ್ತು ಮಂಜುನಾಥ ಅವರು ಬಾವಿ ಕುಸಿದು ಮೃತಪಟ್ಟ ಬಳಿಕ 58 ವರ್ಷಗಳಿಂದ ಕಮಲಮ್ಮ ಒಂಟಿಯಾಗಿದ್ದರು.
ಶಾರದಾ ಕುಟೀರದಲ್ಲಿ ವಾಸವಾಗಿದ್ದರು. ಇತ್ತೀಚಿಗೆ ಅನಾರೋಗ್ಯ ಉಂಟಾಗಿತ್ತು. ಅವರನ್ನು ನೋಡಿಕೊಳ್ಳುವುದಕ್ಕಾಗಿ ಬನಶಂಕರಿ ಸೇವಾಕ್ಷೇತ್ರಕ್ಕೆ ಅವರನ್ನು ಸ್ಥಳಾಂತತರಿಸಲಾಗಿತ್ತು.
ಮೃತರ ಅಂತಿಮ ದರ್ಶನಕ್ಕೆ ಬನಶಂಕರಿ ಸೇವಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.