ADVERTISEMENT

ಸೈಬರ್ ವಂಚಕರ ಕೈಸೇರುತ್ತಿದ್ದ ₹48 ಕೋಟಿ ತಡೆ ಹಿಡಿದ ಪೊಲೀಸರು

ಬ್ಯಾಂಕ್ ಖಾತೆ ಬ್ಲಾಕಿಂಗ್ ತಾಂತ್ರಿಕತೆಯಿಂದ ಯಶಸ್ವಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 2:35 IST
Last Updated 3 ಜೂನ್ 2021, 2:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಜನರನ್ನು ವಂಚಿಸಿ ಕ್ಷಣ ಮಾತ್ರದಲ್ಲಿ ಭಾರಿ ಮೊತ್ತದ ಹಣ ದೋಚುತ್ತಿದ್ದ ಸೈಬರ್ ವಂಚಕರ ಖಾತೆ ಸೇರುತ್ತಿದ್ದ ಸುಮಾರು ₹48 ಕೋಟಿಯನ್ನು ತಡೆಹಿಡಿಯುವಲ್ಲಿ ಬೆಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

‘ಸೈಬರ್‌ ವಂಚನೆಗೆ ಒಳಗಾದವರು ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಂ 112 ಅಥವಾ 100ಕ್ಕೆ ಕರೆ ಮಾಡಿದರೆ,‘ಬ್ಯಾಂಕ್ ಅಕೌಂಟ್ ಬ್ಲಾಕಿಂಗ್ ಸಿಸ್ಟಂ’ ತಾಂತ್ರಿಕತೆಯ ಮೂಲಕ‘ಗೋಲ್ಡನ್ ಅವರ್’ ಬಳಸಿಕೊಂಡು, ನಿಮ್ಮ ಖಾತೆಯಿಂದ ಹಣ ತಲುಪಿರುವ ಬೇರೆ ಖಾತೆಯನ್ನು ಬ್ಲಾಕ್‌ ಮಾಡಿಸಿ ಹಣವನ್ನು ಹಿಂಪಡೆಯಬಹುದು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.

‘ಈ ಪ್ರಕ್ರಿಯೆ ವಂಚನೆಗೆ ಒಳಗಾದ ಕೆಲವೇ ಸಮಯದೊಳಗೆ ಮಾತ್ರ ನಡೆಯಲಿದ್ದು, ಆ ಸಮಯವನ್ನು ‘ಗೋಲ್ಡನ್ ಅವರ್’ ಎನ್ನಲಾಗುವುದು.ವಂಚನೆಗೆ ಒಳಗಾದವರು ತಕ್ಷಣವೇ ಮಾಹಿತಿ ನೀಡಿದರೆ,ವಂಚಕರ ಕೈಸೇರುವ ಮುನ್ನ ಹಣ ವಾಪಸ್ ಪಡೆಯಲು ಅವಕಾಶ ಇರುತ್ತದೆ’.

ADVERTISEMENT

ಪೊಲೀಸರ ಸೋಗಿನಲ್ಲಿ ಬೈಕ್‌ ಕಳ್ಳತನ: ಬಂಧನ
ಬೆಂಗಳೂರು:
ಮಾಲೀಕನಿಂದ ಹಣ ದೋಚುವುದಕ್ಕಾಗಿ ನಕಲಿ ಪೊಲೀಸರ ತಂಡ ರಚಿಸಿ, ಮಾಲೀಕನ ಬೈಕ್‌, ಎಟಿಎಂನಲ್ಲಿದ್ದ ಹಣ ಕಳವು ಮಾಡಿಸಿರುವ ನಾಲ್ಕು ಮಂದಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಬಸವೇಶ್ವರನಗರದ ನಿವಾಸಿ ಶರತ್ ಶೆಟ್ಟಿ (25), ಮೂಡಲಪಾಳ್ಯದ ಪೂರ್ವಿಕ್ ರಾಜ್ (21), ಚೋಳರ ಪಾಳ್ಯದ ಮೋಹನ್ ಕುಮಾರ್ (24), ಜಾಲಹಳ್ಳಿಯಲ್ಲಿ ವಾಸವಿದ್ದ ತಪಸ್ ರಾಯ್ (24) ಬಂಧಿತರು.

‘ಜಾಲಹಳ್ಳಿಯಲ್ಲಿ ವಾಸವಿದ್ದ ಪಶ್ಚಿಮ ಬಂಗಾಳದ ತಪನ್ ಬಿಸ್ವಾಸ್ ವಂಚನೆಗೆ ಒಳಗಾದ ವ್ಯಕ್ತಿ. ಬಂಧಿತ ತಪಸ್‌ ಇವರ ಬಳಿಯೇ ಕೆಲಸ ಮಾಡಿಕೊಂಡಿದ್ದು, ಈ ಕೃತ್ಯ ಎಸಗಿದ್ದಾನೆ. ಬಂಧಿತರಿಂದ ₹41 ಸಾವಿರ ನಗದು, ಒಂದು ಸ್ಕೂಟರ್ ಹಾಗೂ ಎರಡು ಬೈಕ್‌ ಜಪ್ತಿ ಮಾಡಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

‘ಬ್ಯಾಂಕ್ ಅಕೌಂಟ್ ಬ್ಲಾಕಿಂಗ್ಸಿಸ್ಟಂ’ ತಂತ್ರಜ್ಞಾನ ಬಳಸಿ, ಕಳೆದ ಡಿಸೆಂಬರ್‌ನಿಂದ ಮೇ ವರೆಗೆ ದಾಖಲಾಗಿದ್ದ 3,175 ವಂಚನೆ ಪ್ರಕರಣಗಳ ಪೈಕಿ 1,312 ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಲಾಯಿತು. ಇದರಿಂದ ₹48.24 ಕೋಟಿ ಹಣವನ್ನುಸೈಬರ್ ವಂಚಕರ ಕೈಸೇರದಂತೆ ತಡೆಯಲಾಗಿದೆ’ ಎಂದು ಪಂತ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.