ADVERTISEMENT

ಎರಡೇ ವಾರಕ್ಕೆ ಜಲಾಶಯಗಳು ಭರ್ತಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 20:15 IST
Last Updated 12 ಆಗಸ್ಟ್ 2019, 20:15 IST
ಕಬಿನಿ ಜಲಾಶಯ
ಕಬಿನಿ ಜಲಾಶಯ   

ಬೆಂಗಳೂರು: ಈ ಬಾರಿ ರಾಜ್ಯದ ಸಾಕಷ್ಟು ಜಲಾಶಯಗಳು ಭರ್ತಿಯಾಗುವ ಅನುಮಾನ ಕೇವಲ 15 ದಿನಗಳ ಹಿಂದೆ ವ್ಯಕ್ತವಾಗಿತ್ತು. ಆದರೆ ಈಗ ಭಾರಿ ಮಳೆಯಿಂದಾಗಿ ಜಲಾಶಯಗಳು ತುಂಬಿ ತುಳುಕುತ್ತಿದ್ದು, ಪ್ರವಾಹ ಸ್ಥಿತಿ ನೆಲೆಸಿದೆ.

ಮಹಾರಾಷ್ಟ್ರದಲ್ಲಿ ಜುಲೈ ತಿಂಗಳಲ್ಲಿ ಭಾರಿ ಮಳೆಯಾಗಿದ್ದರಿಂದ ಆಲಮಟ್ಟಿ ಜಲಾಶಯ ಭರ್ತಿಯಾಗಿತ್ತು. ಆದರೆ ಇತರ
ಜಲಾಶಯಗಳಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆ ಇತ್ತು. ಕೆಆರ್‌ಎಸ್‌, ತುಂಗಭದ್ರಾ, ಲಿಂಗನಮಕ್ಕಿ, ಘಟಪ್ರಭಾ, ಸೂಪಾ ಮೊದಲಾದ ಜಲಾಶಯಗಳ ಒಳಹರಿವು ನೋಡಿದರೆ ಈ ಬಾರಿ ಅವುಗಳು ಭರ್ತಿಯಾಗಲಾರವು ಎಂದು ಭಾವಿಸಲಾಗಿತ್ತು.

ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯಗಳಿಂದ ಕಳೆದ 5 ದಿನಗಳಲ್ಲಿ 32 ಟಿಎಂಸಿ ಅಡಿಗಳಷ್ಟು ನೀರು ತಮಿಳುನಾಡಿಗೆ ಹರಿದಿದೆ.

ADVERTISEMENT

ಜಲಾಶಯ;ಗರಿಷ್ಠ ಮಟ್ಟ; ಜುಲೈ 27ರಂದು;ಇಂದಿನ ಮಟ್ಟ

ಕೆಆರ್‌ಎಸ್‌;124.80;88.28;121.80

ಹಾರಂಗಿ;2,859;2,833.12;2,854.39

ಹೇಮಾವತಿ;2,922;2,891.50;2,919.41

ಕಬಿನಿ;2,284;2,273.18;2,28246

ಲಿಂಗನಮಕ್ಕಿ;1,819;1,771.55;1811.35

ಸೂಪಾ (ಮೀ);564;542.7;560.92

ಮಾಣಿ (ಮೀ);594.36;576

ತುಂಗಭದ್ರಾ;1,633;1601.15;1,629.78

ಮಲಪ್ರಭಾ;2,079;2,056.70;2,077;15

ಘಟಪ್ರಭಾ;2,175;2,138.50;2,173;47

ಭದ್ರಾ;186;141.20;179.9

ಆಲಮಟ್ಟಿ (ಮೀ);519.60;519.24;518.24

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.