ಬೆಂಗಳೂರು: ದಿನೇಶ್ ಕಲ್ಲಹಳ್ಲಿ ಅವರ ಪತ್ರಕ್ಕೆ ಉತ್ತರಿಸಿರುವ ಪೊಲೀಸರು, ದೂರು ಹಿಂಪಡೆಯಲು ಠಾಣಾ ಮಟ್ಟದಲ್ಲಿ ಅವಕಾಶವಿಲ್ಲವೆಂದು ಹೇಳಿದ್ದಾರೆ.
'ನಿಮ್ಮ ದೂರು ಆಧರಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎಫ್ಐಆರ್ ದಾಖಲಿಸುವ ಹಂತಕ್ಕೆ ಬಂದು ನಿಂತಿದ್ದೇವೆ. ಯುವತಿಯನ್ನೂ ಪತ್ತೆ ಮಾಡಲಾಗಿದ್ದು, ಹೇಳಿಕೆ ಪಡೆಯುವುದು ಬಾಕಿ ಇದೆ' ಎಂದೂ ಪೊಲೀಸರು ತಿಳಿಸಿರುವುದಾಗಿ ಗೊತ್ತಾಗಿದೆ.
ದಿನೇಶ್ ಕಲ್ಲಹಳ್ಳಿ ಪರವಾಗಿ ಅವರ ವಕೀಲರು ಠಾಣೆಗೆ ಬಂದು ಪತ್ರ ನೀಡಿದ್ದಾರೆ. ಅದನ್ನು ಪೊಲೀಸರು ಸ್ವೀಕರಿಸಿದ್ದು, ಮೌಖಿಕವಾಗಿಯೇ ಉತ್ತರಿಸಿ ಕಳುಹಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.