ADVERTISEMENT

ದೋಷಪೂರಿತ ನೋಂದಣಿ ಫಲಕ: 4.1 ಲಕ್ಷ ವಾಹನಗಳ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 19:50 IST
Last Updated 2 ಜನವರಿ 2022, 19:50 IST
   

ಬೆಂಗಳೂರು: ರಾಜ್ಯದಲ್ಲಿ ದೋಷಪೂರಿತ ನೋಂದಣಿ ಫಲಕಗಳನ್ನು ಹೊಂದಿದ್ದ ಒಟ್ಟು 4.1 ಲಕ್ಷ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

‘2020ರಲ್ಲಿ ಒಟ್ಟು 2.5 ಲಕ್ಷ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 2021ರ ನವೆಂಬರ್‌ ವೇಳೆಗೆ ಈ ಸಂಖ್ಯೆ 4.1 ಲಕ್ಷಕ್ಕೆ ಹೆಚ್ಚಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗರಿಷ್ಠ ಭದ್ರತೆಯ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಿಲ್ಲ ಎಂಬ ಕಾರಣ ನೀಡಿ ಸಂಚಾರ ಪೊಲೀಸರು ಕಂಡ ಕಂಡಲ್ಲಿ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದಾರೆ ಎಂದು ವಾಹನ ಸವಾರರು ದೂರಿದ್ದಾರೆ. ಪೊಲೀಸರ ಕ್ರಮದ ವಿರು‌ದ್ಧ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘2019ರ ಏಪ್ರಿಲ್‌ ನಂತರ ನೋಂದಣಿಯಾಗಿರುವ ವಾಹನಗಳಿಗಷ್ಟೇಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಲಾಗಿದೆ. ಅದಕ್ಕಿಂತಲೂ ಹಳೆಯದಾದ ವಾಹನಗಳಿಗೆಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿಲ್ಲ. ಈ ಬಗ್ಗೆ ಶೀಘ್ರವೇ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.