ADVERTISEMENT

ಗಂಗಾಧರ ಶಾಸ್ತ್ರಿ, ಕಂದಗಲ್‌ ಹನುಮಂತರಾಯರ ರಂಗಭೂಮಿ ಟ್ರಸ್ಟ್‌ಗಳು ಅಸ್ತಿತ್ವಕ್ಕೆ

ಕಂದಗಲ್‌ ಹನುಮಂತರಾಯರ ವೃತ್ತಿ ರಂಗಭೂಮಿ ಟ್ರಸ್ಟ್‌ ರಚನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 16:08 IST
Last Updated 9 ಜೂನ್ 2025, 16:08 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಚಿತ್ತರಗಿಯಲ್ಲಿ ಶ್ರೀಗಂಗಾಧರ ಶಾಸ್ತ್ರಿ ಪ್ರತಿಷ್ಠಾನ ಹಾಗೂ ಬೀಳಗಿ ತಾಲ್ಲೂಕಿನಲ್ಲಿ ಕಂದಗಲ್‌ ಹನುಮಂತರಾಯರ ವೃತ್ತಿ ರಂಗಭೂಮಿ ಟ್ರಸ್ಟ್‌ ರಚಿಸಿ ಸರ್ಕಾರದ ಆದೇಶ ಹೊರಡಿಸಿದೆ.

ಗಂಗಾಧರ ಶಾಸ್ತ್ರಿ ಅವರು ವೃತ್ತಿ ರಂಗಭೂಮಿಗೆ ಅಮೃತಸ್ಪರ್ಶ ನೀಡಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ. ಕಲೆಯನ್ನೇ ಕಾಯಕ ಎಂದು ನಂಬಿದ್ದರು. ಅವರ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೇಳಿದೆ.

ADVERTISEMENT

ಗುರು ಬಿ. ಹಿರೇಮಠ (ಅಧ್ಯಕ್ಷ), ಶಿವಕುಮಾರ ಗಂಗಾಧರ ಶಾಸ್ತ್ರಿ ಹಿರೇಮಠ, ಅಭಯರಾಮ ಮನಗೂಳಿ, ಪರಸಪ್ಪ ಹನುಮಂತಪ್ಪ ಬಿಸಲದಿನ್ನಿ, ವಿಜಯಲಕ್ಷ್ಮಿ ಬಸವರಾಜ ಹಿರೇಮಠ, ಕುಮಾರಸ್ವಾಮಿ ಮುಪ್ಪಯ್ಯ ಹಿರೇಮಠ, ವಿಜಯಕುಮಾರ ಎಸ್‌. ಕಟಗಿಹಳ್ಳಿ ಮಠ, ಮಲ್ಲಪ್ಪ ಮಹಾಂತಪ್ಪ ಬಿಸರಡ್ಡಿ (ಸದಸ್ಯರು) ಶ್ರೀಗಂಗಾಧರ ಶಾಸ್ತ್ರಿ ಪ್ರತಿಷ್ಠಾನಕ್ಕೆ ನೇಮಕವಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.