ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಸೋಮವಾರ ಸುದೀರ್ಘ ಉತ್ತರ ನೀಡಿದ ಗೃಹಸಚಿವ ಪರಮೇಶ್ವರ, ‘ಈವರೆಗೆ ಸಿಕ್ಕಿರುವ ಮೂಳೆಯ ಅವಶೇಷಗಳು ಮತ್ತು ಮೂಳೆ ಕರಗಿರುವ ಸಾಧ್ಯತೆ ಇರಬಹುದಾದ ಮಣ್ಣಿನ ಪರಿಶೀಲನೆ ನಡೆಯುತ್ತಿದೆ. ಎಫ್‌ಎಸ್‌ಎಲ್‌ಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ವರದಿ ಬರುವವರೆಗೆ ಸದ್ಯಕ್ಕೆ ಗುಂಡಿ ಅಗೆಯುವ ಕಾರ್ಯ ನಿಲ್ಲಿಸಲಾಗುತ್ತದೆ ಎಂದು ಎಸ್‌ಐಟಿ ಹೇಳಿದ್ದಾರೆ. ಈವರೆಗೆ ಮಣ್ಣನ್ನು ಅಗೆಯುವ ಕಾರ್ಯ ನಡೆದಿದ್ದು, ಅದರ ವಿಶ್ಲೇಷಣೆ ನಂತರ, ನಿಜವಾದ ತನಿಖೆ ಆರಂಭವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.