
ಪ್ರಜಾವಾಣಿ ವಾರ್ತೆಪ್ರಾತಿನಿಧಿಕ ಚಿತ್ರ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಕುರಿತು ನಡೆಸುತ್ತಿದ್ದ ತನಿಖೆಯನ್ನು ಎಸ್‌ಐಟಿ ಸ್ಥಗಿತಗೊಳಿಸಿದೆ. ಹೈಕೋರ್ಟ್ ಮಧ್ಯಂತರ ತಡೆ ನೀಡಿರುವ ಕಾರಣ ನಿಲ್ಲಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
‘ನಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ಸಂಬಂಧಿಸಿದ ವಿಚಾರಣೆಯನ್ನು ಸಮಾಪ್ತಿಗೊಳಿಸಲು ಆದೇಶಿಸಬೇಕು’ ಎಂದು ಗಿರೀಶ ಮಟ್ಟೆಣ್ಣವರ, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ. ಮತ್ತು ವಿಠ್ಠಲ ಗೌಡ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
‘ಕೋರ್ಟ್ ಆದೇಶವು ತನಿಖೆಗೆ ಹಿನ್ನಡೆಯಾಗುವುದಿಲ್ಲ. ಇದು ತಾತ್ಕಾಲಿಕ ವಿರಾಮವಾಗಿದೆ. ಎಸ್‌ಐಟಿ ಕೋರ್ಟ್ ಎದುರು ತನ್ನ ವಾದ ಮಂಡಿಸಿಲ್ಲ. ಈ ಬೆಳವಣಿಗೆಯು ನಿರ್ಣಾಯಕ ಹಂತ ಎಂದು ಪರಿಗಣಿತವಾಗುವುದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.