
ಪ್ರಜಾವಾಣಿ ವಾರ್ತೆಬೆಂಗಳೂರು: ಚಿತ್ರ ನಿರ್ದೇಶಕ ಕಿರಣ್ ಗೋವಿ(50) ಶನಿವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.
ಕಚೇರಿಯಲ್ಲಿ ಅವರ ಮುಂದಿನ ಚಿತ್ರ ‘ಜಸ್ಟೀಸ್’ನ ಬರಹದಲ್ಲಿದ್ದ ವೇಳೆ ಗೋವಿ ಅವರಿಗೆ ಹೃದಯಾಘಾತವಾಯಿತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಆಗಲೇ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.
ಸಿನಿಪಯಣ: 2008ರಲ್ಲಿ ತೆರೆಕಂಡ ‘ಪಯಣ’ ಚಿತ್ರದ ಮೂಲಕ ಅವರು ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದರು. ರವಿಶಂಕರ್ ಗೌಡ ನಾಯಕ ನಟರಾಗಿ ನಟಿಸಿದ್ದ ‘ಪಯಣ’ ಸಿನಿಮಾ ಹಿಟ್ ಆಗಿತ್ತು. ‘ಸಂಚಾರಿ’, ‘ಪಾರು ವೈಫ್ ಆಫ್ ದೇವದಾಸ್’, ‘ಯಾರಿಗೆ ಯಾರುಂಟು’ ಸಿನಿಮಾಗಳನ್ನು ನಿರ್ದೇಶಿಸಿದ್ದರು.
‘ಸಂಚಾರಿ’ ತೆಲುಗಿಗೆ ರಿಮೇಕ್ ಆಗಿತ್ತು. ಭಾನುವಾರ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.