ADVERTISEMENT

ಮತಗಟ್ಟೆ ಬಳಿಯೇ ಹಣ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 18:33 IST
Last Updated 28 ಅಕ್ಟೋಬರ್ 2020, 18:33 IST
ಪಾವಗಡ ಮತಗಟ್ಟೆ ಬಳಿ ಚೀಟಿ ಪಡೆಯಲು ಗುಂಪುಗೂಡಿರುವ ಮತದಾರರು
ಪಾವಗಡ ಮತಗಟ್ಟೆ ಬಳಿ ಚೀಟಿ ಪಡೆಯಲು ಗುಂಪುಗೂಡಿರುವ ಮತದಾರರು   

ಪಾವಗಡ (ತುಮಕೂರು):ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬುಧವಾರ ನಡೆದ ಮತದಾನದ ವೇಳೆ ಇಲ್ಲಿಯ ಮತಗಟ್ಟೆ ಯೊಂದರ ಬಳಿಯೇಮತದಾರರಿಗೆ ರಾಜಾರೋಷವಾಗಿ ಹಣ, ಬ್ಯಾಗ್, ವಾಚ್ ಹಂಚಿದ ಆರೋಪಗಳು ಕೇಳಿಬಂದಿವೆ.

ಪಟ್ಟಣದ ಸರ್ಕಾರಿ ಪಿ.ಯು ಕಾಲೇಜು ಮತಗಟ್ಟೆ ಬಳಿ ಪಕ್ಷೇತರ ಅಭ್ಯರ್ಥಿಯೊಬ್ಬರ ಪರವಾಗಿ ಸರ್ಕಾರಿ ಪದವಿ ಕಾಲೇಜು ಮತ್ತು ಪಿಯು ಕಾಲೇಜು ಉಪನ್ಯಾಸಕರು ಹಣ ಹಂಚಿದರು. ಮತವೊಂದಕ್ಕೆ ₹ 1,500 ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಳಿದ ರಾಜಕೀಯ ಪಕ್ಷಗಳ ಬೆಂಬಲಿಗರು ಕೂಡ ಬ್ಯಾಗ್‌, ಹಣ ಮತ್ತು ವಾಚ್‌ ಮುಂತಾದ ಉಡುಗೊರೆ ಹಂಚಿದರು. ಮೂರು ಪ್ರಮುಖ ರಾಜಕೀಯ ಪಕ್ಷಗಳ‌ ಅಭ್ಯರ್ಥಿಗಳಿಗಿಂತ ಪಕ್ಷೇತರ ಅಭ್ಯರ್ಥಿಯ ಪರವಾಗಿ ಹಣ ಹಂಚಿಕೆ ಅಬ್ಬರ ಜೋರಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.