ADVERTISEMENT

Karnataka politics | ಖರ್ಗೆ ಜೊತೆ ‌ರಾಜಕೀಯ ಮಾತನಾಡಿಲ್ಲ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 16:09 IST
Last Updated 17 ನವೆಂಬರ್ 2025, 16:09 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಮಲ್ಲಿಕಾರ್ಜುನ ಖರ್ಗೆಯವರ ಜೊತೆ ‌ನಾನು ರಾಜಕೀಯ ಮಾತನಾಡಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಜೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಶಾಸಕರು, ಪರಿಷತ್‌ ಸದಸ್ಯರಾಗಿರುವವರು ಸಚಿವ ಸ್ಥಾನಕ್ಕೆ ಆಸೆಪಡುವುದರಲ್ಲಿ ತಪ್ಪೇನಿದೆ? ಎಲ್ಲರಿಗೂ ಆ ಹಕ್ಕು ಇದೆ’ ಎಂದರು. 

‘ಎಷ್ಟೋ ಜನ, ಏನೂ ಆಗದವರನ್ನು ದಿನ ಬೆಳಗಾಗುವುದರೊಳಗೆ ಹಿಂದೆ ಸಚಿವರಾಗಿ ಮಾಡಿರಲಿಲ್ಲವೇ. ನೆಲೆ ಇಲ್ಲದವರನ್ನು, ಪರಿಷತ್ ಸದಸ್ಯರಾಗಿರುವವರನ್ನು ಸಚಿವರಾಗಿ ಮಾಡುವ ಅವಕಾಶ ಮುಖ್ಯಮಂತ್ರಿಗಿದೆ’ ಎಂದರು.

ADVERTISEMENT

‘ಯಾರೆಲ್ಲ ಪಕ್ಷಕ್ಕಾಗಿ ದುಡಿದಿದ್ದಾರೆ, ತ್ಯಾಗ ಮಾಡಿರುತ್ತಾರೆ ಅವರೆಲ್ಲ ಅಧಿಕಾರಕ್ಕಾಗಿ ಆಸೆಪಡುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.