
ಪ್ರಜಾವಾಣಿ ವಾರ್ತೆ
ಡಿ.ಕೆ. ಶಿವಕುಮಾರ್
ನವದೆಹಲಿ: ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಮಾತುಕತೆಗಳ ನಡುವೆ ದೆಹಲಿಗೆ ಭೇಟಿ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಅಸ್ಸಾಂ ಚುನಾವಣೆ ಬಗ್ಗೆ ಚರ್ಚೆ ಮಾಡಲು ಸೋನಿಯಾ ಗಾಂಧಿ ನಿವಾಸಕ್ಕೆ ಆಗಮಿಸಿದ್ದೆವು ಎಂದು ಅವರು ತಿಳಿಸಿದ್ದಾರೆ. ಅಸ್ಸಾಂನಲ್ಲಿ ಕಾಂಗ್ರೆಸ್ ಸರ್ಕಾರ ವಾಪಸ್ ಬರಲಿದೆ ಎಂದಿದ್ದಾರೆ.
ಸೋನಿಯಾ ನಿವಾಸದ ಒಳಗೆ ಏನು ಮಾತನಾಡಿದೆ, ಯಾರ ಬಳಿ ಮಾತನಾಡಿದೆ ಎಂಬುದನ್ನು ಹೇಳಲ್ಲ. ಇಲ್ಲಿ ಬೀದಿಯಲ್ಲಿ ನಿಂತು ಎಲ್ಲ ಮಾತನಾಡುವ ಅಗತ್ಯ ಇಲ್ಲ. ಬಂದ ಮೇಲೆ ಏನು ಮಾತನಾಡಬೇಕೋ ಎಲ್ಲವನ್ನೂ ಮಾತನಾಡಿದ್ದೀನಿ. ದೆಹಲಿಗೆ ಬಂದಿದ್ದೇ ರಾಜಕೀಯ ಮಾಡಲು. ಎಲ್ಲ ವಿಚಾರ ಮಾತನಾಡದೆ ಸುಮ್ನೆ ಹೊಗ್ತೀವಾ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.