ADVERTISEMENT

ಡಿ.ಕೆ.ಶಿವಕುಮಾರ್‌ಗೆ 600 ಕೆ.ಜಿ. ಸೇಬಿನ ಹಾರ ಹಾಕಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 11:14 IST
Last Updated 26 ಅಕ್ಟೋಬರ್ 2019, 11:14 IST
   

ಬೆಂಗಳೂರು: ಸುಮಾರು 50 ದಿನಗಳ ಜೈಲುವಾಸದ ಬಳಿಕ ದಹಲಿಯಿಂದ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿರುವ ಕಾಂಗ್ರೆಸ್‌ ಶಾಸಕ ಡಿ. ಕೆ. ಶಿವಕುಮಾರ್ ಅವರು ಇದೀಗ ಟರ್ಮಿನಲ್‌ನಿಂದ ಹೊರಕ್ಕೆ ಬರುತ್ತಿದ್ದು, ಅವರನ್ನು ಸ್ವಾಗತಿಸಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ.

ಸಾದಹಳ್ಳಿ ಟೋಲ್‌ ಗೇಟ್‌ ಬಳಿ ಸಾವಿರಾರು ಅಭಿಮಾನಿಗಳು ಕೆಲವು ಗಂಟೆಗಳಿಂದ ಕಾಯುತ್ತಿದ್ದು, 600 ಕೆ.ಜಿ. ತೂಕದ 20 ಅಡಿ ಉದ್ದದ ಸೇಬಿನ ಹಾರವನ್ನು ಕ್ರೇನ್‌ ಮೂಲಕ ಡಿಕೆಶಿ ಅವರಿಗೆ ಹಾಕಲು ಸಿದ್ಧತೆ ನಡೆದಿದೆ. ಕಲಾ ತಂಡಗಳು ಉತ್ಸಾಹದಿಂದ ಪ್ರದರ್ಶನ ಆರಂಭಿಸಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿದೆ.

ಸಾದಹಳ್ಳಿ ಗೇಟ್‌ ದಾಟಿ ವಿಮಾನನಿಲ್ದಾಣದತ್ತ ತೆರಳುವುದಕ್ಕೆ ಅಭಿಮಾನಿಗಳಿಗೆ ಅವಕಾಶ ಕೊಟ್ಟಿಲ್ಲ. ಅಭಿಮಾನಿಗಳು ಘೋಷಣೆ ಕೂಗುತ್ತಿದ್ದು, ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.