ADVERTISEMENT

ನಿರುದ್ಯೋಗ ಸೃಷ್ಟಿಯೇ ಗುಜರಾತ್‌ ಮಾದರಿಯಾ: ಡಿಕೆಶಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 20:45 IST
Last Updated 16 ಜುಲೈ 2021, 20:45 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಂಗಳೂರು: ‘ಎಲ್ಲಿದೆ ಗುಜರಾತ್‌ ಮಾದರಿ? ನಿರುದ್ಯೋಗ ಸೃಷ್ಟಿಯೇ ಗುಜರಾತ್‌ ಮಾದರಿಯಾ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ನೇತೃತ್ವದ ತಂಡದ ಗುಜರಾತ್ ಪ್ರವಾಸ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ಲಾಕ್‌ಡೌನ್‌, ಸೀಲ್‌ಡೌನ್‌ ಎಲ್ಲ ಮಾಡಲಾಯಿತು. ಉದ್ಯಮಿಗಳ ಪರ ಎಂದು ಬಿಂಬಿಸಿಕೊಂಡ ಬಿಜೆಪಿ ಸರ್ಕಾರ, ತೆರಿಗೆಯನ್ನು ಏಕೆ ಮನ್ನಾ ಮಾಡಲಿಲ್ಲ’ ಎಂದು ಕೇಳಿದರು.

‘ಸರ್ಕಾರದವರು ಅಧ್ಯಯನ ಮಾಡಲು ಗುಜರಾತ್‌ಗೆ ಹೋಗುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಯಾವ ಮಾದರಿಯನ್ನಾದರೂ ಅವರು ನೀಡಲಿ. ಆದರೆ, ರಾಜ್ಯದ ಜನರಿಗೆ ನ್ಯಾಯ ಒದಗಿಸಬೇಕು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕು’ ಎಂದು ಆಗ್ರಹಿಸಿದರು.

ಕೋವಿಡ್‌ ಲಸಿಕೆ ಪೂರೈಕೆ ವಿಚಾರದಲ್ಲಿ ಮುಖ್ಯಮಂತ್ರಿಯವರು ಧ್ವನಿ ಎತ್ತಬೇಕು. ಗುಜರಾತ್‌ಗೆ ನೀಡಿರುವ ಲಸಿಕೆಯ ಅರ್ಧದಷ್ಟನ್ನೂ ಕರ್ನಾಟಕಕ್ಕೆ ನೀಡಿಲ್ಲ. ಗುಜರಾತ್‌ಗೆ ಸರಿಸಮನಾಗಿ ಲಸಿಕೆ ಹಂಚಿಕೆ ಮಾಡುವಂತೆ ಬೇಡಿಕೆ ಇಡಬೇಕು ಎಂದು ಶಿವಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.