ADVERTISEMENT

ಜನಾರ್ದನ ರೆಡ್ಡಿ ಅಮೆರಿಕದಿಂದ ಭದ್ರತೆ ತರಿಸಿಕೊಳ್ಳಲಿ: ಡಿಕೆಶಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 16:13 IST
Last Updated 4 ಜನವರಿ 2026, 16:13 IST
<div class="paragraphs"><p>ಡಿಕೆಶಿ </p></div>

ಡಿಕೆಶಿ

   

ಬೆಂಗಳೂರು: ‘ಬಳ್ಳಾರಿ ಗಲಭೆಗೆ ಸಂಬಂಧಿಸಿದಂತೆ ಎಚ್.ಎಂ .ರೇವಣ್ಣ ಅವರು ಒಳ್ಳೆಯ ಮಾಹಿತಿಗಳನ್ನು ಪಡೆದುಕೊಂಡು ಬಂದಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

'ಬಳ್ಳಾರಿ ಗಲಭೆ ಕುರಿತು ಅಧ್ಯಯನ ನಡೆಸಲು ಕೆಪಿಸಿಸಿ ರಚಿಸಿರುವ ಎಚ್.ಎಂ.ರೇವಣ್ಣ ನೇತೃತ್ವದ ಸಮಿತಿ ವರದಿ ನೀಡಿದೆಯೇ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ರೇವಣ್ಣ ನನ್ನನ್ನು ಭೇಟಿ ಮಾಡಿ ಅಧಿಕೃತ ಹಾಗೂ ಅನಧಿಕೃತ ವಿಚಾರಗಳನ್ನು ತಿಳಿಸಿದ್ದಾರೆ’ ಎಂದರು.

ADVERTISEMENT

‘ಎಲ್ಲ ಕಡೆಗಳಲ್ಲೂ ಪ್ರತಿಮೆಗಳನ್ನು ಸ್ಥಾಪಿಸುತ್ತಾರೆ. ಅದಕ್ಕೆ ಅಸೂಯೆ ಏಕೆ ಪಡಬೇಕು. ವಾಲ್ಮೀಕಿ ಮಹರ್ಷಿ ಒಂದು ಸಮುದಾಯಕ್ಕೆ ಸೇರಿದವರೇ? ಹೀಗಿರುವಾಗ ಅವರ ಬ್ಯಾನರ್ ಹಾಕಲು ಜನಾರ್ದನ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದು ಸರಿಯಲ್ಲ’ ಎಂದರು.

ಜನಾರ್ದನ ರೆಡ್ಡಿ ಝೆಡ್ ಪ್ಲಸ್ ಭದ್ರತೆ ಕೇಳಿರುವ ಕುರಿತು ಕೇಳಿದ್ದಕ್ಕೆ ‘ಝಡ್‌ ಭದ್ರತೆಯಾದರೂ ಕೇಳಲಿ. ಇರಾನ್, ಅಮೆರಿಕದಿಂದಾದರೂ ಭದ್ರತೆ ತೆಗೆದುಕೊಂಡು ಬರಲಿ. ಬೇಡ ಅಂದವರು ಯಾರು’ ಎಂದು ಪ್ರಶ್ನಿಸಿದರು.

‘ಶಾಸಕ ಭರತ್‌ ರೆಡ್ಡಿ ಆಪ್ತ ಸತೀಶ್ ರೆಡ್ಡಿಯ ಗನ್ ಮ್ಯಾನ್ ಹಾರಿಸಿದ ಗುಂಡು ತಗಲಿ ಸಾವು ಸಂಭವಿಸಿತ್ತು’ ಎನ್ನುವ ವರದಿ ಬಗ್ಗೆ ಕೇಳಿದಾಗ, ‘ಯಾರದ್ದೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ವರದಿ ಬಗ್ಗೆ ನನಗೆ ಗೊತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.