
ಪ್ರಜಾವಾಣಿ ವಿಶೇಷಎರಡೂವರೆ ವರ್ಷದ ನಂತರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಅಗಬೇಕು ಎನ್ನುವ ಭಾವನೆ ನಮಗೂ ಇತ್ತು. ಪಕ್ಷಕ್ಕಾಗಿ ದುಡಿದಿರುವ ಶಿಸ್ತಿನ ಸಿಪಾಯಿ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಚನ್ನರಾಯಪಟ್ಟಣದ ಕುಂದೂರು ಮಠದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಎರಡೂವರೆ ವರ್ಷ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕು. ಇದು ನಮ್ಮ ಸಮುದಾಯದವರ ಹಾಗೂ ನನ್ನ ಭಾವನೆ. ಪಕ್ಷ ನಿಷ್ಠರಾಗಿದ್ದು, ಪಕ್ಷ ಬಿಟ್ಟುಕೊಟ್ಟವರಲ್ಲ. ಪಕ್ಷಕ್ಕಾಗಿ ಎಷ್ಟೋ ನೋವುಗಳನ್ನು ನುಂಗಿದ್ದಾರೆ. ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವ ಭಾವನೆ ಇದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.