ADVERTISEMENT

ಸೋಮಶೇಖರ್‌ ಜತೆಗೆ ಭಿನ್ನಾಭಿಪ್ರಾಯವಿಲ್ಲ: ಜಗ್ಗೇಶ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 11:08 IST
Last Updated 1 ಡಿಸೆಂಬರ್ 2019, 11:08 IST
ಎಸ್.ಟಿ.ಸೋಮಶೇಖರ್ ಅವರೊಂದಿಗೆ ಜಗ್ಗೇಶ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಬಿಬಿಎಂಪಿ ಸದಸ್ಯರಾದ ಆರ್ಯ ಶ್ರೀನಿವಾಸ್, ರಾಜಣ್ಣ, ವಿ.ವಿ.ಸತ್ಯನಾರಾಯಣ ಮತ್ತಿತರರು ಇದ್ದಾರೆ
ಎಸ್.ಟಿ.ಸೋಮಶೇಖರ್ ಅವರೊಂದಿಗೆ ಜಗ್ಗೇಶ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಬಿಬಿಎಂಪಿ ಸದಸ್ಯರಾದ ಆರ್ಯ ಶ್ರೀನಿವಾಸ್, ರಾಜಣ್ಣ, ವಿ.ವಿ.ಸತ್ಯನಾರಾಯಣ ಮತ್ತಿತರರು ಇದ್ದಾರೆ   

ಬೆಂಗಳೂರು: ‘ಈ ಹಿಂದೆ ಇದೇ ಪುಣ್ಯಾತ್ಮ ಏನೇನೋ ಅಂದಿದ್ದ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಸ್ಪರ್ಧೆಯ ಒತ್ತಡದಲ್ಲಿ ಪರಸ್ಪರ ಕೆಲ ಮಾತುಗಳನ್ನಾಡಿರಬಹುದು. ರಾಜಕೀಯ ರಂಗದಲ್ಲಿ ಇದೆಲ್ಲಾ ಸಾಮಾನ್ಯ. ನಮ್ಮ ನಡುವೆ ಈಗ ಯಾವುದೇ ಅಸಮಾಧಾನವಿಲ್ಲ’ ಎಂದು ಬಿಜೆಪಿ ಮುಖಂಡ ಜಗ್ಗೇಶ್ ಹೇಳಿದರು.

ಕೆಂಗೇರಿ ಉಪನಗರದಲ್ಲಿ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಶೂಟಿಂಗ್‌ನಲ್ಲಿ ತೊಡಗಿದ್ದ ಕಾರಣ ನಾಮಪತ್ರ ಸಲ್ಲಿಕೆಗೆ ಬರಲು ಸಾಧ್ಯವಾಗಲಿಲ್ಲ’ ಎಂದರು.

‘ಪೂರ್ವಾಶ್ರಮದಲ್ಲಿ ನಾನೂ ಕೂಡ ಕಾಂಗ್ರೆಸ್ ಕಾರ್ಯಕರ್ತ. ನಾನು ಪಕ್ಷ ಬಿಡುವಾಗ ಇದೇ ಸೋಮಶೇಖರ್ ನನ್ನ ಮನವೊಲಿಸಲು ಬಂದಿದ್ದರು. ಗೋಡೆ ಹಾರಿ ಅವರಿಂದ ತಪ್ಪಿಸಿಕೊಂಡಿದ್ದೆ’ ಎಂದು ಚಟಾಕಿ ಹಾರಿಸಿದರು.

ADVERTISEMENT

‘ಲಾಭದ ಉದ್ದೇಶಕ್ಕೆ ದುಡಿದರೆ ಆತ ಸಮಯೋಚಿತ ವ್ಯಕ್ತಿಯಾಗುತ್ತಾನೆ. ಮನಃಪೂರ್ವಕವಾಗಿ ದುಡಿಯುವವನೇ ಕಾರ್ಯಕರ್ತ’ ಎಂದರು.

ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ‘ಕಾಂಗ್ರೆಸಿನ ಮೂಲ ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯಲು ನಾನು ಯಾವುದೇ ಒತ್ತಡ ತಂತ್ರ ಅನುಸರಿಸುತ್ತಿಲ್ಲ. ಹಾಗೊಂದು ವೇಳೆ ಈ ಆರೋಪ
ಸಾಬೀತಾದರೆ ನಾನೇ ನಾಮಪತ್ರ ಹಿಂಪಡೆಯುವೆ’ ಎಂದರು.

‘ಕ್ಷೇತ್ರದಲ್ಲಿ ಕೆಲವು ತುರ್ತು ಕಾಮಗಾರಿಗಳನ್ನು ಮಾತ್ರ ಕೆಆರ್‌ಐಡಿಎಲ್‌ ಮುಖಾಂತರ ಕೈಗೊಂಡಿದ್ದು, ಮಿಕ್ಕುಳಿದ ಕಾಮಗಾರಿಯನ್ನು ನಿಯಮದಂತೆ ಟೆಂಡರ್ ಮೂಲಕವೇ ಜಾರಿಗೆ ತರಲಾಗುತ್ತಿದೆ. ಪಾರದರ್ಶಕತೆಗೆ ಒತ್ತು ಕೊಟ್ಟೇ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎಂದರು.

ಪಾಲಿಕೆಯ ಕಾಂಗ್ರೆಸ್‌ ಸದಸ್ಯರಾದ ಆರ್ಯ ಶ್ರೀನಿವಾಸ್ ಮತ್ತು ರಾಜಣ್ಣ ಮಾತನಾಡಿ, ‘ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಎಸ್.ಟಿ.ಸೋಮಶೇಖರ್ ಅವರನ್ನು ಬೆಂಬಲಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.