ADVERTISEMENT

ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೋಟೆಲ್ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ

ಮತದಾರರಿಗೆ ಹಂಚಲು ಕವರ್‌ಗಳಲ್ಲಿ ಇಟ್ಟಿದ್ದ ಸುಮಾರು ₹6 ಲಕ್ಷ ನಗದು ಜಪ್ತಿ

​ಪ್ರಜಾವಾಣಿ ವಾರ್ತೆ
Published 8 ಮೇ 2023, 18:35 IST
Last Updated 8 ಮೇ 2023, 18:35 IST
ಯಾಸಿರ್ ಖಾನ್ ಪಠಾಣ್ ಮಾಲೀಕತ್ವದ ಹೋಟೆಲ್ ಮೇಲೆ ಸೋಮವಾರ ರಾತ್ರಿ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿ ನಡೆದಿದೆ.
ಯಾಸಿರ್ ಖಾನ್ ಪಠಾಣ್ ಮಾಲೀಕತ್ವದ ಹೋಟೆಲ್ ಮೇಲೆ ಸೋಮವಾರ ರಾತ್ರಿ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿ ನಡೆದಿದೆ.   

ಹಾವೇರಿ: ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಮಾಲೀಕತ್ವದ ಹೋಟೆಲ್ ಮೇಲೆ ಸೋಮವಾರ ರಾತ್ರಿ ಚುನಾವಣೆ ಅಧಿಕಾರಿಗಳಿಂದ (ಫ್ಲೈಯಿಂಗ್ ಸ್ಕ್ವಾಡ್) ದಾಳಿ ನಡೆದಿದೆ.

ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಟೋಲ್ ನಾಕಾ ಬಳಿ ಇರುವ ಎನ್ ಎಚ್-4 ಗ್ರ್ಯಾಂಡ್ ಹೋಟೆಲ್ ಮೇಲೆ ದಾಳಿ ನಡೆದಿದೆ.

ಮತದಾರರಿಗೆ ಹಂಚಲು ಕವರ್‌ಗಳಲ್ಲಿ ಇಟ್ಟಿದ್ದ ಸುಮಾರು ₹6 ಲಕ್ಷ ನಗದನ್ನು ಜಪ್ತಿ ಮಾಡಲಾಗಿದೆ. ತಲಾ ಕವರ್‌ನಲ್ಲಿ ₹ 3 ಸಾವಿರ ನಗದು ಇತ್ತು ಎನ್ನಲಾಗಿದೆ.

ADVERTISEMENT

ಹಣ ಜಪ್ತಿ ಮಾಡಿದ ಚುನಾವಣಾ ಅಧಿಕಾರಿಗಳು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ತೆರಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿದ್ದ ಯಾಸಿರ್ ಖಾನ್ ಪಠಾಣ್ ಒಡೆತನದ ಹೋಟೆಲ್ ಮೇಲೆ ಚುನಾವಣೆ ಸಂದರ್ಭ ದಾಳಿ ನಡೆದಿರುವುದಕ್ಕೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.