ADVERTISEMENT

ಕಲಬುರ್ಗಿ: ತಾಂತ್ರಿಕ ಸಮಸ್ಯೆಯಿಂದ ಕೈಕೊಟ್ಟ ಮತಯಂತ್ರಗಳು, ಮತದಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಮೇ 2019, 4:27 IST
Last Updated 19 ಮೇ 2019, 4:27 IST
ಲಂಬಾಣಿ ಮಹಿಳೆಯರು ಮತದಾನ ಮಾಡಲು ಉತ್ಸಾಹದಿಂದ ಮತಗಟ್ಟೆಗಳಿಗೆ ಬರುತ್ತಿದ್ದಾರೆ.
ಲಂಬಾಣಿ ಮಹಿಳೆಯರು ಮತದಾನ ಮಾಡಲು ಉತ್ಸಾಹದಿಂದ ಮತಗಟ್ಟೆಗಳಿಗೆ ಬರುತ್ತಿದ್ದಾರೆ.   

ಕಲಬುರ್ಗಿ: ಚಿಂಚೋಳಿ ಹಾಗೂ ಕುಂದಗೋಳದಲ್ಲಿಉಪ ಚುನಾವಣೆಯ ಮತದಾನ ಆರಂಭವಾಗಿದ್ದು, ಹಲವೆಡೆ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಮತದಾನಕ್ಕೆ ಅಡಚಣೆ ಉಂಟಾಗಿದೆ.

ನೀಮಾ ಹೊಸಳ್ಳಿ, ‌ಮಿರಿಯಾಣ, ಸೋಮಲಿಂಗದಳ್ಳಿ, ವೆಂಕಟಾಪುರ, ಗಾರಂಪಳ್ಳಿ ಹಾಗೂ ಐನೊಳ್ಳಿಯಲ್ಲಿ ಮತಯಂತ್ರಗಳಲ್ಲಿ ದೋಷ ಕಂಡು ಬಂದಿದೆ.

ಮತದಾನ ತಡವಾದಹಿನ್ನೆಲೆ ಚುನಾವಣಾ ಅಧಿಕಾರಿಗಳುಮತಗಟ್ಟೆಗಳಿಗೆ ದೌಡಾಯಿಸಿದ್ದಾರೆ. ಕೆಲವೆಡೆದೋಷ ಸರಿಪಡಿಸಿ ಮತದಾನಕ್ಕೆ ಅನುವು ಮಾಡಲಾಗಿದೆ.

ADVERTISEMENT

ಚಿಂಚೋಳಿಯಲ್ಲಿ ಬೆಳಿಗ್ಗೆ 9 ಗಂಟೆವರೆಗೆ ಶೇ 7.88ರಷ್ಟು ಮತದಾನವಾಗಿದೆ.

ಕುಂದಗೋಳ ಉಪಚುನಾವಣೆ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಶೇ.9.59 ರಷ್ಟು ಮತದಾನವಾಗಿದೆ. ಇದುವರೆಗೆ 10919 ಪುರುಷರು ಹಾಗೂ 7241 ಮಹಿಳೆಯರು ಸೇರಿದಂತೆ ಒಟ್ಟು 18,160 ಜನ ತಮ್ಮ ಮತ ಚಲಾಯಿಸಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 189441 ಮತದಾರಿದ್ದು ಚುನಾವಣಾ ಕಣದಲ್ಲಿ 8 ಅಭ್ಯರ್ಥಿಗಳು ಇದ್ದಾರೆ.

ಕಲಬುರ್ಗಿ ಜಿಲ್ಲೆ ಕಾಳಗಿ ಪಟ್ಟಣದ ಮತಗಟ್ಟೆ ಸಂಖ್ಯೆ 215ರಲ್ಲಿ 105 ವರ್ಷದ ಬಸಮ್ಮ ಅವರು ಮತ ಚಲಾಯಿಸಲು ಕಾದು ಕುಳಿತಿರುವುದು ಕಂಡು ಬಂತು
ಕುಂದಗೋಳದ ಅಂಚಟಗೇರಿಯ ಮತ ಚಲಾಯಿಸಲು ಬಂದ ಅಂಗವಿಕಲೆ ಶಾಂತವ್ವ ವಾಲೀಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.