ADVERTISEMENT

ಕೆಸರಿನಿಂದ ರಕ್ಷಿಸಲಾಗಿದ್ದ ಆನೆ ಸಾವು: ಚಿತೆಯತ್ತ ನೆಗೆದ ಮರಿಯಾನೆ

ತಬ್ಬಲಿಯಾದ ಮರಿಯಾನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 20:15 IST
Last Updated 29 ನವೆಂಬರ್ 2018, 20:15 IST
ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ಕೆಸರಿನಿಂದ ಮೇಲೆತ್ತಿದ್ದ ಹೆಣ್ಣು ಕಾಡಾನೆ ಮೃತಪಟ್ಟಿರುವುದು.
ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ಕೆಸರಿನಿಂದ ಮೇಲೆತ್ತಿದ್ದ ಹೆಣ್ಣು ಕಾಡಾನೆ ಮೃತಪಟ್ಟಿರುವುದು.   

ಸಕಲೇಶಪುರ: ತಾಲ್ಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಹೊಂಡದಲ್ಲಿ ಸಿಲುಕಿಕೊಂಡು ನಿತ್ರಾಣಗೊಂಡಿದ್ದ ಹೆಣ್ಣಾನೆ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಸಾವನ್ನಪ್ಪಿದೆ.

ಅರಣ್ಯ ಇಲಾಖೆ ಸಿಬ್ಬಂದಿ, ಹಿಟಾಚಿ ಯಂತ್ರ ಬಳಸಿ ಕಾಡಾನೆ ರಕ್ಷಿಸಿದ್ದರು. ಕೆಸರಿನಿಂದ ಮೇಲೆತ್ತಿದ್ದಾಗ ಆನೆ ಮುಂಭಾಗದ ಎಡಗಾಲು ಮುರಿದು ಊದಿಕೊಂಡಿತ್ತು. ಹೆಜ್ಜೆ ಇಡಲೂ ಆಗದೇ ಮಡಚಿಕೊಂಡು ಮೂರು ಕಾಲುಗಳಲ್ಲಿಯೇ ನಿಂತು ಆಹಾರ ತಿನ್ನುತ್ತಿತ್ತು.

ಚಿತೆಯತ್ತ ನೆಗೆದ ಮರಿಯಾನೆ: ಕಳೇಬರಕ್ಕೆ ಬೆಂಕಿ ಹಚ್ಚಿದ ನಂತರ ಮರಿಯಾನೆಯನ್ನು ಸಕ್ರೆಬೈಲು ಆನೆಧಾಮಕ್ಕೆ ಸಾಗಿಸಲು ಪಿಕ್‌ಅಪ್‌ ಜೀಪಿಗೆ ಹತ್ತಿಸಲಾಗಿತ್ತು. ಆದರೆ, ಜೀಪಿನಿಂದ ಜಿಗಿದು ಚಿತೆಯತ್ತ ಓಡಿತ್ತು. ಮರಳಿ ಜೀಪಿಗೆ ಹತ್ತಿಸಲು ಪ್ರಯತ್ನಿಸಿದರೂ ಹತ್ತಲೇ ಇಲ್ಲ. ಸಕ್ರೆಬೈಲು ಶಿಬಿರದಿಂದ ಶುಕ್ರವಾರ ಸಾಕಾನೆ ತರಿಸಿ ಅದರ ನೆರವಿನೊಂದಿಗೆ ಸಾಗಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ADVERTISEMENT

ಸದ್ಯ ಕುಮ್ಕಿಂ ಆನೆಗಳೊಂದಿಗೆ ಬಿಡಲಾಗಿದೆ. ತಾಯಿಯಿಲ್ಲದೆ ಚಟಪಡಿಸುತ್ತಿದ್ದ ಮರಿಯ ಮರುಕ ಕಂಡು ಅಲ್ಲಿದ್ದವರ ಕಣ್ಣು ಒದ್ದೆಯಾಗಿದ್ದವು.

ಸಕಲೇಪುರದ ಕಡಗರವಳ್ಳಿಯಲ್ಲಿ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ಗಂಡು ಮರಿ ಆನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.