ADVERTISEMENT

ಈಶ್ವರಪ್ಪಗೆ ವಿಆರ್‌ಎಸ್‌ ಕೊಡುತ್ತಿರುವ ಬಿಜೆಪಿ: ಕಾಂಗ್ರೆಸ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 20:03 IST
Last Updated 1 ಆಗಸ್ಟ್ 2021, 20:03 IST
ಕೆ.ಎಸ್‌. ಈಶ್ವರಪ್ಪ
ಕೆ.ಎಸ್‌. ಈಶ್ವರಪ್ಪ   

ಬೆಂಗಳೂರು: ‘ಕೆ.ಎಸ್‌. ಈಶ್ವರಪ್ಪ ಅವರಿಗೆ ಬಿಜೆಪಿ ಬಲವಂತವಾಗಿ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ನೀಡುತ್ತಿದೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಈಶ್ವರಪ್ಪ ಅವರನ್ನು ಕೈಬಿಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಈ ರೀತಿ ವ್ಯಂಗ್ಯವಾಡಿದೆ.

‘ನಾನು ಹಿರಿಯ ಎನ್ನುತ್ತಾ ಸ್ಥಾನಮಾನಕ್ಕೆ ಅಂಗಲಾಚುತ್ತಿರುವ ಈಶ್ವರಪ್ಪನವರಿಗೆ ರಿಟೈರ್ಡ್ ಆಗುವ ಮುಂಚೆಯೇ ಬಿಜೆಪಿ ಬಲವಂತವಾಗಿ ವಿಆರ್‌ಎಸ್ ಕೊಡುತ್ತಿದೆ! ಬಿಜೆಪಿಗೆ ಈಶ್ವರಪ್ಪ ಈಗ ಬಳಸಿ ಬಿಸಾಡಿದ ಒಡೆದ ಮಡಕೆ!’ ಎಂದು ಕಾಂಗ್ರೆಸ್ಹೇಳಿದೆ.

ADVERTISEMENT

‘ಈಶ್ವರಪ್ಪನವರೇ, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡುವ ಮುಂಚೆ ನಿಮ್ಮ ಸ್ಥಾನ ಮತ್ತು ಮಾನ ಉಳಿಸಿಕೊಳ್ಳುವುದನ್ನು ನೋಡಿ!’ ಎಂದೂ ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.