
ನವದೆಹಲಿ: '2030ರ ವೇಳೆಗೆ ಎಲೆಕ್ಟ್ರಿಕ್ ವಾಹನ (ಇ.ವಿ) ಮಾರುಕಟ್ಟೆ ಒಟ್ಟು ₹20 ಲಕ್ಷ ಕೋಟಿಗೆ ಬೆಳೆಯಲಿದ್ದು, ಐದು ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ‘ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದರು.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರಸ್ತುತ ದೇಶದಲ್ಲಿ 57 ಲಕ್ಷ ಇ.ವಿ. ವಾಹನಗಳು ನೋಂದಣಿ ಆಗಿವೆ. ಕರ್ನಾಟಕದಲ್ಲಿ 2020ರಲ್ಲಿ 9,686 ವಾಹನಗಳು ನೋಂದಣಿ ಆಗಿದ್ದರೆ, 2025ರಲ್ಲಿ 1.69 ಲಕ್ಷ ವಾಹನಗಳು ನೋಂದಣಿಯಾಗಿವೆ‘ ಎಂದರು.
‘2024-25ರಲ್ಲಿ ಇ.ವಿ. ವಾಹನಗಳ ಮಾರಾಟವು ಶೇಕಡಾ 208 ರಷ್ಟು ಹೆಚ್ಚಾಗಿದೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ಶೇಕಡಾ 4.2ರಷ್ಟು ಜಾಸ್ತಿ ಆಗಿದೆ. ಇ.ವಿ. ದ್ವಿಚಕ್ರ ವಾಹನಗಳ ಮಾರಾಟ ಶೇಕಡಾ 33ರಷ್ಟು, ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟ ಶೇಕಡಾ 14 ರಷ್ಟು ಹೆಚ್ಚಾಗಿದೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.