ಬೆಂಗಳೂರು: ತಮ್ಮ ಬಗ್ಗೆ ಬಿ ಟಿ.ವಿ ಸುಳ್ಳು ಸುದ್ದಿ ಹರಡಿದೆ ಎಂದು ನಿವೃತ್ತ ಐ.ಎ.ಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರು ಗರಂ ಆಗಿದ್ದಾರೆ.
‘ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ವಿಧಾನ ಪರಿಷತ್‌ಗೆ ನಾಮಕರಣ, ರಾಜ್ಯಪಾಲರಿಗೆ ಶಿಫಾರಸ್ಸು‘ ಎಂದು ಅತೀಕ್ ಅವರ ಫೋಟೊ ಸಮೇತ ಬಿ ಟಿ.ವಿ ಹೆಸರಿನಲ್ಲಿರುವ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ತಮ್ಮ ಎಕ್ಸ್ ಖಾತೆಯಲ್ಲಿ ಜೂನ್ 5 ರಂದು ಈ ಪೋಸ್ಟರ್ ಹಂಚಿಕೊಂಡಿರುವ ಅತೀಕ್ ಅವರು, ‘ಇದೊಂದು ಸುಳ್ಳು ಸುದ್ದಿ, ಬಿ ಟಿ.ವಿ ಸುಳ್ಳು ಸುದ್ದಿ ಹರಡುತ್ತಿದೆ. ಇದನ್ನು ನಂಬಬೇಡಿ. ಬಿ ಟಿ.ವಿ ಅವರು ಇಂತಹ ದುಷ್ಕೃತ್ಯಗಳಿಂದ ದೂರ ಇರುತ್ತಾರೆಂದು ನಾನು ನಂಬುತ್ತೇನೆ’ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಪೋಸ್ಟ್ ಅನ್ನು ಬಿ ಟಿ.ವಿ ಕನ್ನಡ ಎಕ್ಸ್ ಅಕೌಂಟ್‌ಗೆ ಟ್ಯಾಗ್ ಮಾಡಿದ್ದಾರೆ. ಆದರೆ ಬಿ ಟಿ.ವಿ ಪ್ರತಿಕ್ರಿಯೆ ನೀಡಿಲ್ಲ.
ಎಲ್.ಕೆ. ಅತೀಕ್ ಅವರು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.