ADVERTISEMENT

ಕರ್ನಾಟಕದಲ್ಲಿ ಲಿಂಗಾನುಪಾತ ಕುಸಿತ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 16:37 IST
Last Updated 23 ಜುಲೈ 2023, 16:37 IST
ಲಿಂಗಾನುಪಾತ ಕುಸಿತ (ಪ್ರಾತಿನಿಧಿಕ ಚಿತ್ರ)
ಲಿಂಗಾನುಪಾತ ಕುಸಿತ (ಪ್ರಾತಿನಿಧಿಕ ಚಿತ್ರ)   

ನವದೆಹಲಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ದೇಶದ ಎಂಟು ರಾಜ್ಯಗಳಲ್ಲಿ ಲಿಂಗಾನುಪಾತದ ಪ್ರಮಾಣ ಗಣನೀಯವಾಗಿ ಕುಸಿದಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯದ ವರದಿ ಹೇಳಿದೆ. 

ಕರ್ನಾಟಕ, ದೆಹಲಿ, ಪಂಜಾಬ್‌, ತಮಿಳುನಾಡು, ಪಶ್ಚಿಮ ಬಂಗಾಳ, ಬಿಹಾರ ಮತ್ತು ಹರಿಯಾಣದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಕುಸಿದಿರುವುದು ಆತಂಕ ಮೂಡಿಸಿದೆ.  

ಕರ್ನಾಟಕದಲ್ಲಿ 2020–21ರಲ್ಲಿ 1,000 ಪುರುಷರಿಗೆ 949 ಮಹಿಳೆಯರು ಇದ್ದರು. 2021–22ರಲ್ಲಿ ಮಹಿಳೆಯರ ಸಂಖ್ಯೆ 940 ಇತ್ತು. 2022–23ರಲ್ಲಿ 945 ಮಹಿಳೆಯರು ಇದ್ದಾರೆ. ಈ ಅವಧಿಯಲ್ಲಿ ಸ್ತ್ರೀಯರ ಸಂಖ್ಯೆ ಕೊಂಚ ಏರಿಕೆಯಾಗಿದೆ ಎಂದು ವರದಿ ವಿವರಿಸಿದೆ.  

ADVERTISEMENT

ದೇಶದಲ್ಲಿ ‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆ ಯಶಸ್ವಿಗೊಂಡಿದೆ ಎಂಬ ನೀತಿ ಆಯೋಗದ ವರದಿ ಹೊರಬಿದ್ದ ಬೆನ್ನಲ್ಲೇ ಈ ವರದಿ ಬಹಿರಂಗಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.