ADVERTISEMENT

ಚಿಕ್ಕೋಡಿ: ಕಾಲುವೆಯಲ್ಲಿ ಮಲಗಿ ರೈತರ ಪ್ರತಿಭಟನೆ

ಚಿಕ್ಕೋಡಿ: ಕೊನೆಯ ಭಾಗಕ್ಕೆ ಬಾರದ ಕಾಲುವೆ ನೀರು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 0:10 IST
Last Updated 14 ಫೆಬ್ರುವರಿ 2026, 0:10 IST
ಚಿಕ್ಕೋಡಿ ತಾಲ್ಲೂಕಿನ ಡೋಣವಾಡ ಗ್ರಾಮದ ಮಹಾಂತನಗರ ತೋಟದ ವಸತಿ ಪ್ರದೇಶದಲ್ಲಿ ಕಾಲುವೆಗೆ ನೀರು ಹರಿಸದೇ ಇರುವುದರಿಂದ ರೈತರು ಕಾಲುವೆಯಲ್ಲಿ ಮಲಗಿಕೊಂಡು ಪ್ರತಿಭಟನೆ ನಡೆಸಿದರು         
ಪ್ರಜಾವಾಣಿ ಚಿತ್ರ : ಚಂದ್ರಶೇಖರ ಎಸ್. ಚಿನಕೇಕರ
ಚಿಕ್ಕೋಡಿ ತಾಲ್ಲೂಕಿನ ಡೋಣವಾಡ ಗ್ರಾಮದ ಮಹಾಂತನಗರ ತೋಟದ ವಸತಿ ಪ್ರದೇಶದಲ್ಲಿ ಕಾಲುವೆಗೆ ನೀರು ಹರಿಸದೇ ಇರುವುದರಿಂದ ರೈತರು ಕಾಲುವೆಯಲ್ಲಿ ಮಲಗಿಕೊಂಡು ಪ್ರತಿಭಟನೆ ನಡೆಸಿದರು          ಪ್ರಜಾವಾಣಿ ಚಿತ್ರ : ಚಂದ್ರಶೇಖರ ಎಸ್. ಚಿನಕೇಕರ   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಡೊಣವಾಡ ಗ್ರಾಮದ ಮಹಾಂತ ನಗರ ಸೇರಿ ವಿವಿಧ ತೋಟದ ವಸತಿ ಪ್ರದೇಶದ ಜನರು ಶುಕ್ರವಾರ ನೀರಾವರಿ ಕಾಲುವೆಯಲ್ಲೇ ಅಡ್ಡಲಾಗಿ ಮಲಗಿ, ಪ್ರತಿಭಟನೆ ಮಾಡಿದರು.

‘ಕೊಟಬಾಗಿ ಏತ ನೀರಾವರಿಯ ಕಾಲುವೆಗೆ ನೀರು ಹರಿಸದ ಕಾರಣ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತದೆ. ಕೂಡಲೇ ಕೊನೆಯ ಭಾಗದವರೆಗೆ ನೀರು ಹರಿಸಿ’ ಎಂದು ಆಗ್ರಹಿಸಿದರು.

ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ನಿರ್ವಹಣೆ ಆಗುವ 17 ಕಿ.ಮೀ ಉದ್ದದ ಕಾಲುವೆಯಲ್ಲಿ 178.62 ಕ್ಯೂಸೆಕ್ ನೀರು ಹರಿಯಬೇಕಿತ್ತು ಎಂದು ಪ್ರತಿಪಾದಿಸಿದರು. 

ADVERTISEMENT

‘ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುವೆಯ ಹೂಳು ತೆರವು ಮಾಡಲಾಗಿದೆ. ಆದರೆ, ಅಧಿಕಾರಿಗಳು ನೀರು ಬಿಡುಗಡೆಗೆ ಮೀನ–ಮೇಷ ತೋರುತ್ತಿದ್ದಾರೆ’ ಎಂದು ರೈತ ಮುಖಂಡ ರಾಚಪ್ಪ ಶಿವಾಪೂರೆ ಆರೋಪಿಸಿದರು.

‘ಕೆಲವೆಡೆ ಕಾಲುವೆ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದೆ. ಕಾಲುವೆ ಕೊನೆವರೆಗೆ ನೀರು ಹರಿಯುತ್ತಿಲ್ಲ. ಕಾಲುವೆಯ ಕೊನೆ ಭಾಗದ ರೈತರು ನೀರು ಇಲ್ಲದೇ ಬೆಳೆಯನ್ನು ಹೇಗೆ ಉಳಿಸಿಕೊಳ್ಳುವುದು ಹೇಗೆ? ಜನ ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ’ ಎಂದು ರೈತ ಬಾಬು ಮಗದುಮ್ಮ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.