ADVERTISEMENT

‘ಡೈಲಾಗ್ ಹೊಡೆದು ಜನರ ಕೈಗೆ ಸಿಗದೆ ಬಚ್ಚಿಟ್ಟುಕೊಳ್ಳೊ ನಾವಲ್ಲಾ ಹೀರೊಗಳು...’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜೂನ್ 2020, 14:42 IST
Last Updated 26 ಜೂನ್ 2020, 14:42 IST
ನವರಸ ನಾಯಕ ಜಗ್ಗೇಶ್‌
ನವರಸ ನಾಯಕ ಜಗ್ಗೇಶ್‌   

ಪರದೆ ಮೇಲೆ ಡೈಲಾಗ್ ಹೋಡೆದು ಜನರ ಕೈಗೆ ಸಿಗದೆ ಬಚ್ಚಿಟ್ಟುಕೊಳ್ಳೊ ನಾವಲ್ಲಾ ಹೀರೊಗಳು... ಹೀಗೆಂದು ಟ್ವೀಟ್‌ ಮಾಡಿದ್ದಾರೆ ನವರಸ ನಾಯಕ ಜಗ್ಗೇಶ್‌.

ಭಾರತ ಮತ್ತು ಚೀನಾ ಗಡಿಯ ದುರ್ಗಮ ಪ್ರದೇಶವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸೇನೆಯ ಯೋಧರೊಬ್ಬರು, ‘ ನಾವು ಇಂಥ ಕಠಿಣ ಪ್ರದೇಶಕ್ಕೂ ಚೀನಾ ವಿರುದ್ಧ ಹೋರಾಡುತ್ತಿದ್ದೇವೆ. ನೀವು (ದೇಶದ ನಾಗರಿಕರು) ಚೀನಾದ ಆ್ಯಪ್‌, ವಸ್ತುಗಳನ್ನಾದರೂ ಬಹಿಷ್ಕರಿಸಿ ದೇಶ ಪ್ರೇಮ ಮೆರೆಯಬೇಕು,’ ಎಂದು ಸಲಹೆ ನೀಡಿರುವ ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ರೀಟ್ವೀಟ್‌ ಮಾಡಿರುವ ಜಗ್ಗೇಶ್‌, ಅದಕ್ಕೆ ತಮ್ಮದೇ ಆಭಿಪ್ರಾಯವನ್ನೂ ಸೇರಿಸಿದ್ದಾರೆ.

ADVERTISEMENT

‘ಎಂಥ ಅದ್ಭುತ ಹೀರೋಗಳು ನೀವು. ನಿಜವಾದ ಭಾರತದ ಸೂಪರ್‌ ಸ್ಟಾರ್‌ಗಳು ನೀವೆ. ಪರದೆ ಮೇಲೆ ಡೈಲಾಗ್ ಹೋಡೆದು ಜನರ ಕೈಗೆ ಸಿಗದೆ ಬಚ್ಚಿಟ್ಟುಕೊಳ್ಳುವ ನಾವಲ್ಲಾ ಹೀರೊಗಳು. ಒಬ್ಬ ಹೀರೋನ ಕಟಿಂಗ್‌, ಬಟ್ಟೆ ಸ್ಟೈಲ್ ಅನುಕರಣೆ ಮಾಡುವ ಬದಲು ದೇಶ ಕಾಯುವ ಈ ಹೀರೊಗಳನ್ನು ಬೆಂಬಲಿಸಿದರೆ ಆತ್ಮಗೌರವ ಹೆಚ್ಚುತ್ತದೆ. ಈಸೈನಿಕ ಹೇಳಿದಂತೆ ಚೀನಾದ ಆ್ಯಪ್‌ಗಳನ್ನು ಮತ್ತು ವಸ್ತುಗಳನ್ನು ಬಹಿಷ್ಕರಿಸೋಣ,’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.