ADVERTISEMENT

ಶುಚಿ ಯೋಜನೆಯಡಿ ಉಚಿತ ಸ್ಯಾನಿಟರಿ ನಾಪ್‌ಕಿನ್ ವಿತರಿಸಲಾಗುವುದು: ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2023, 11:01 IST
Last Updated 16 ಆಗಸ್ಟ್ 2023, 11:01 IST
   

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿನಿಯರಿಗೆ ಮುಂದಿನ ತಿಂಗಳಿನಲ್ಲಿ (ಸೆಪ್ಟೆಂಬರ್‌) ‘ಶುಚಿ ಯೋಜನೆ’ಯಡಿ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಿಸಲಾಗುವುದು ಎಂದು ಕಾಂಗ್ರೆಸ್‌ ತಿಳಿಸಿದೆ.

ಶುಚಿ ಯೋಜನೆ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಹೆಣ್ಣು ಮಕ್ಕಳಿಗೆ ಅನುಕೂಲಕರವಾಗಿದ್ದ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್ ನೀಡುವ ಯೋಜನೆಗೆ ಬಿಜೆಪಿ ಆಡಳಿತದಲ್ಲಿ ಗ್ರಹಣ ಹಿಡಿದಿತ್ತು ಎಂದು ಕುಟುಕಿದೆ.

ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ಗೌರವ, ಕಾಳಜಿ ಇಲ್ಲ. ಈ ಕಾರಣದಿಂದಾಗಿ ಶುಚಿ ಯೋಜನೆಯನ್ನು ನಿರ್ಲಕ್ಷಿಸಿತ್ತು. ನಮ್ಮ ಸರ್ಕಾರ ಶುಚಿ ಯೋಜನೆಗಿದ್ದ ಅಡೆತಡೆಗಳನ್ನು ನಿವಾರಿಸಿ ಶಾಲಾ ಕಾಲೇಜಿನ ಹೆಣ್ಣು ಮಕ್ಕಳಿಗೆ ನ್ಯಾಪ್‌ಕಿನ್ ವಿತರಿಸಲು ಕ್ರಮ ಕೈಗೊಂಡಿದೆ. ಮಹಿಳಾ ಸಬಲೀಕರಣ ಕಾಂಗ್ರೆಸ್ ಪಕ್ಷದ ಬದ್ಧತೆ ಎಂದು ಹೇಳಿದೆ.

ADVERTISEMENT

ಮತ್ತೊಂದು ಟ್ವೀಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಬೆಲೆ ಏರಿಕೆಯ ಪರಿಣಾಮ ಕುಟುಂಬ ನಿರ್ವಹಣೆ ಭಾರವಾಗಿರುವ ಹೊತ್ತಿನಲ್ಲಿ ಗೃಹಲಕ್ಷ್ಮಿ ಯೋಜನೆ ಜನತೆಗೆ ವರವಾಗಿ ಬರಲಿದೆ.1.28 ಕೋಟಿ ಫಲಾನುಭವಿಗಳಲ್ಲಿ ಇದುವರಿಗೂ 1.9 ಕೋಟಿ ಜನ ನೋಂದಣಿ ಮಾಡಿಕೊಂಡಿದ್ದಾರೆ. ಜನತೆಗೆ ಸುಸ್ಥಿರ ಬದುಕನ್ನು ಕಟ್ಟಿಕೊಡುವುದೇ ಅಭಿವೃದ್ಧಿಯ ನೈಜ ಅರ್ಥ ಎಂದು ಕಾಂಗ್ರೆಸ್ ನಂಬಿದೆ ಎಂದು ತಿಳಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.