ADVERTISEMENT

ಹೊಳೆನರಸೀಪುರ: ಜಿಲೆಟಿನ್‌ ಸ್ಫೋಟಗೊಂಡು ಒಬ್ಬ ಸಾವು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 20:40 IST
Last Updated 4 ಏಪ್ರಿಲ್ 2021, 20:40 IST
ಜಿಲೆಟಿನ್‌ ಸಂಗ್ರಹ (ಸಾಂದರ್ಭಿಕ ಚಿತ್ರ)
ಜಿಲೆಟಿನ್‌ ಸಂಗ್ರಹ (ಸಾಂದರ್ಭಿಕ ಚಿತ್ರ)   

ಹೊಳೆನರಸೀಪುರ: ತಾಲ್ಲೂಕಿನ ಹಳೇಕೋಟೆ ಹೋಬಳಿಯ ಚಾಕೇನಹಳ್ಳಿ ಕಟ್ಟೆ ಗ್ರಾಮದ ಗೋದಾಮಿನಿಂದ ಭಾನುವಾರ ಸ್ಫೋಟಕ ಸಾಮಗ್ರಿ ಸಾಗಿಸುವ ವೇಳೆ ಜಿಲೆಟಿನ್‌ ಸ್ಫೋಟಗೊಂಡು ಒಬ್ಬರು ಮೃತಪಟ್ಟಿದ್ದಾರೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಶ್ರವಣಬೆಳಗೊಳ ಹೋಬಳಿಯ ಬೆಟ್ಟದಹಳ್ಳಿ ಗ್ರಾಮದ ಸಂಪತ್ (27) ಮೃತಪಟ್ಟವರು.

ಗಂಭೀರವಾಗಿ ಗಾಯಗೊಂಡಿರುವ ಚಾಕೇನಹಳ್ಳಿ ಗ್ರಾಮದ ನಟರಾಜ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಗಾಯಾಳುರವಿಕುಮಾರ್‌ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು, ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ADVERTISEMENT

ಚಾಕೇನಹಳ್ಳಿಕಟ್ಟೆ ಗ್ರಾಮದ ನಾಗೇಶ್ ಎಂಬುವರು ಸ್ಫೋಟಕ ಸಾಮಗ್ರಿಗಳ ಸಂಗ್ರಹ ಮತ್ತು ಮಾರಾಟಕ್ಕೆ ಪರವಾನಗಿ ಪಡೆದಿದ್ದರು. ಇವರ ಬಳಿ ಸ್ಫೋಟಕ ಪಡೆದು ದ್ವಿಚಕ್ರ ವಾಹನದಲ್ಲಿ ಇಟ್ಟುಕೊಳ್ಳುವ ವೇಳೆ ಅವಘಢ ಸಂಭವಿಸಿದೆ.

ಸ್ಫೋಟದ ತೀವ್ರತೆಗೆ ದೇಹಗಳು 300 ಮೀಟರ್‌ ದೂರದಲ್ಲಿ ಬಿದ್ದಿದ್ದವು. ಎರಡು ಬೈಕ್‌ಗಳು ಸುಟ್ಟು ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.