ADVERTISEMENT

ಗೋಪಾಲ ಜೋಶಿ ನಿಧನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 22:50 IST
Last Updated 3 ಆಗಸ್ಟ್ 2020, 22:50 IST
ಗೋಪಾಲ ಜೋಶಿ
ಗೋಪಾಲ ಜೋಶಿ   

ಧಾರವಾಡ: ಮನೋಹರ ಗ್ರಂಥಮಾಲಾ ಸಂಸ್ಥಾಪಕ ಜಿ.ಬಿ.ಜೋಶಿ ಅವರ ಎರಡನೇ ಪುತ್ರ ಗೋಪಾಲ ಜೋಶಿ (78) ಸೋಮವಾರ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಮನೋಹರ ಗ್ರಂಥಮಾಲಾ ಚಂದಾದಾರರಿಗೆ ಪುಸ್ತಕಗಳನ್ನು ತಲುಪಿಸುವ ಗುರುತರ ಜವಾಬ್ದಾರಿ ಹೊತ್ತಿದ್ದ ಗೋಪಾಲ ಜೋಶಿ ಅವರು ಕರ್ನಾಟಕದ ಉದ್ದಗಲಕ್ಕೂ ಓಡಾಡಿ ಸಾಹಿತ್ಯ ಸೇವೆ ಮಾಡಿದ್ದರು.

ಓದುಗರ ವಿಮರ್ಶೆ, ಸಲಹೆಗಳನ್ನು ಪಡೆದು ಅದನ್ನು ಸಂಪಾದಕೀಯ ಮಂಡಳಿಗೆ ತಲುಪಿಸುವ ಮೂಲಕ ಸಾಹಿತಿಗಳು, ಓದುಗರು ಹಾಗೂ ಪ್ರಕಾಶಕರ ನಡುವಿನ ಕೊಂಡಿಯಾಗಿ ಕೆಲಸ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.