ADVERTISEMENT

ಇನ್ನೂ 20 ವರ್ಷ ಮೋದಿ ಗ್ರಾಫ್ ಏರಿಕೆ: ಗೋವಿಂದ ಕಾರಜೋಳ ಭವಿಷ್ಯ

ದೆಹಲಿ ಚುನಾವಣೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 13:48 IST
Last Updated 12 ಫೆಬ್ರುವರಿ 2020, 13:48 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ    

ಬಾಗಲಕೋಟೆ: 'ಕೇವಲ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ನೋಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಗ್ರಾಫ್‌ ಕೆಳಗಿಳಿದಿದೆ ಎಂದು ಕಾಂಗ್ರೆಸ್‌ನವರು ವಿಶ್ಲೇಷಿಸುವ ಅಗತ್ಯವಿಲ್ಲ. ದೇಶದಲ್ಲಿ ಇನ್ನೂ 20 ವರ್ಷಗಳ ಕಾಲ ಮೋದಿ ಗ್ರಾಫ್ ಏರಿಕೆ ಹಾದಿಯಲ್ಲಿರಲಿದೆ' ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭವಿಷ್ಯ ನುಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದೆಹಲಿಯದ್ದು ಒಂದು ಊರಿಗೆ ಸೀಮಿತ ಚುನಾವಣೆ. ಆಮ್‌ ಆದ್ಮಿ ಪಕ್ಷದ ಜನಪ್ರಿಯ ಯೋಜನೆಗಳ ಘೋಷಣೆಗೆ ಆಕರ್ಷಿತರಾಗಿ ಜನ ಮತ ಕೊಟ್ಟಿದ್ದು,ಮುಂದೆ ಅವರಿಗೇ ನಿರಾಶೆ ಆಗಲಿದೆ. ಅಷ್ಟಕ್ಕೂ ದೆಹಲಿಯಲ್ಲಿ ಅಧಿಕಾರ ನಮ್ಮ (ಬಿಜೆಪಿ) ಬಳಿ ಇರಲಿಲ್ಲ. ಆಮ್‌ ಆದ್ಮಿ ಪಕ್ಷದ ಕೈಯಲ್ಲಿತ್ತು. ಅದನ್ನು ಅವರು ಉಳಿಸಿಕೊಂಡಿದ್ದಾರೆ. ಬಿಜೆಪಿ ಮತ ಗಳಿಕೆ ಪ್ರಮಾಣ ಏರಿಕೆ ಆಗಿರುವುದನ್ನು ವಿರೋಧಿಗಳು ಗಮನಿಸಬೇಕು‘ ಎಂದರು.

ಮೀಸಲಾತಿಗೆ ತೊಡಕು ಇಲ್ಲ:ಸಮಾಜದಲ್ಲಿ ತುಳಿತಕ್ಕೆ ಒಳಗಾದವರು ಹಾಗೂ ಅಸ್ಪೃಶ್ಯತೆಯಿಂದ ಬಳಲುವವರನ್ನು ಮೇಲೆತ್ತುವ ಸಲುವಾಗಿ ಮೀಸಲಾತಿ ವ್ಯವಸ್ಥೆ ಇದೆ. ಹೀಗಾಗಿ ಅದಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. 2012ರಲ್ಲಿ ಉತ್ತರಾಖಂಡ್‌ನಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರದ ಫಲ ಸುಪ್ರೀಂಕೋರ್ಟ್‌ನ ಈಗಿನ ತೀರ್ಪು. ಆದರೂ ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಮೀಸಲಾತಿಗೆ ಧಕ್ಕೆ ಬಾರದಂತೆ ಸಂವಿಧಾನದ ಆಶಯಕ್ಕನುಗುಣವಾಗಿ ಮುಂದುವರೆಯಲಿದ್ದೇವೆ ಎಂದು ಭರವಸೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.