ADVERTISEMENT

ರಾಜ್ಯಪಾಲರಿಂದ ಸರ್ಕಾರ ಸುಳ್ಳು ಹೇಳಿಸಿದೆ- ಸಿದ್ದರಾಮಯ್ಯ 

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 9:23 IST
Last Updated 28 ಜನವರಿ 2021, 9:23 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: 'ರಾಜ್ಯಪಾಲರ ಮೂಲಕ ಸರ್ಕಾರ ಭಾಷಣ ಮಾಡಿಸಿದೆ. ರಾಜ್ಯಪಾಲರು ಸರ್ಕಾರ ಬರೆದು ಕೊಟ್ಟಿದನ್ನು ಓದುತ್ತಾರೆ. ಭಾಷಣದಲ್ಲಿ ಸ್ಪಷ್ಟತೆ.ಇರಬೇಕು. ಸರ್ಕಾರದ.ನಿಲುವು. ಯೋಜನೆಗಳು, ಧ್ಯೆಯ ಧೊರಣೆಗಳು, ಮುನ್ನೋಟ ಇರಬೇಕು. ಆದರೆ, ಈ ಭಾಷಣ ನೋಡಿದಾಗ ಯಾವುದೂ ಕಾಣಿಸುವುದಿಲ್ಲ. ಇದೊಂದು ಸುಳ್ಳಿನ ಕಂತೆ. ರಾಜ್ಯಪಾಲರ ಬಾಯಿಂದ ಸರ್ಕಾರ ಸುಳ್ಳು ಹೇಳಿಸಿದೆ' ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

'ನಮ್ಮ ಸರ್ಕಾರದ ಸಾಧನೆಗಳನ್ನೆ ಪುನರುಚ್ಚಾರ ಮಾಡಿಸಿದ್ದಾರೆ. ಭಾಷಣಕ್ಕೆ ಗೊತ್ತು ಗುರಿ ಏನು ಇಲ್ಲ. ಒಂದು ದೂರದೃಷ್ಟಿ ಇರಬೇಕು. ಇನ್ನು ಎರಡು ವರ್ಷ ಇದೆ. ಯಾವುದೇ ದೂರ ದೃಷ್ಠಿ.ಇಲ್ಲ. ಹಣಕಾಸಿನ ಪರಿಸ್ಥಿತಿ ಬಗ್ಗೆ ಪ್ರಸ್ತಾಪ ಮಾಡಿಲ್ಲ.' ಎಂದು ದೂರಿದರು.

'ರಾಜ್ಯ ಅಭಿವೃದ್ಧಿಯಲ್ಲಿ 10 ವರ್ಷ ಹಿಂದೆ ಹೋಗಿದೆ. ಎಲ್ಲೆಲ್ಲಿ ಕೊರೊನಾ ನೆಪ.ಹೇಳುತ್ತಿದ್ದಾರೆ. ಶಾಸಕರ ಕ್ಷೇತ್ರದ ನಿಧಿ ಕೇಳಿದರೆ ಕೊರೊನಾ, ನೀರಾವರಿ ಯೋಜನೆಗಳಿಗೆ ಹಣ ಇಲ್ಲ. ಇವರು ಅಧಿಕಾರಕ್ಕೆ ಬಂದು ಒಂದು ವರ್ಷ ಏಳು ತಿಂಗಳಾಯಿತು. ಇಷ್ಟು ದಿನದಲ್ಲಿ ಇವರ ಸಾಧನೆ ಏನು ಎಂದು ಹೇಳಲಿಲ್ಲ. ಈ ಸರ್ಕಾರದ ಸಾಧನೆ ಶೂನ್ಯ. ಇದು ಯಾವುದೇ ರಾಜ್ಯದ ಪ್ರಗತಿಯ ದೂರ ದೃಷ್ಟಿ.ಇಲ್ಲದ.ಭಾಷಣ . ಕರ್ನಾಟಕದ ಇತಿಹಾಸದಲ್ಲಿ ಇಂತಹ ಕಳಪೆ ಭಾಷಣ ನಾನು ನೋಡಿಲ್ಲ' ಎಂದು ಟೀಕಿಸಿದರು.

ADVERTISEMENT

'ಬೆಳಗಾವಿಯಲ್ಲಿ ಎರಡು ಬಾರಿ ಅಧಿವೇಶನ ಮಾಡಬೇಕಿತ್ತು. ಉಮೇಶ ಕತ್ತಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ.ಮಾತಾಡ್ತಾರೆ. ಇವರಿಗೆ ಉತ್ತರ.ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ. ಸುವರ್ಣ ಸೌಧ ಕಟ್ಟಿಸಿರೊದು ಏಕೆ. ಇವರಿಗೆ ಬದ್ಧತೆ ಇಲ್ಲ. ನಾವಿದ್ದಾಗ ೫ ವರ್ಷ ಮಾಡಿದ್ದೇವೆ. ಉತ್ತರ ಕರ್ನಾಟಕದ ಜನರಿಗೆ ಮಾಡಿದ ದ್ರೋಹ ಇದು. ನಾನು ಇಲಾಖೆಗಳನ್ನು ಸ್ಥಳಾಂತರ.ಮಾಡಲು ಆದೇಶ ಮಾಡಿದ್ದೆ. ಅದನ್ನು ಪಾಲನೆ ಮಾಡಿಲ್ಲ.ವರ್ಷಕ್ಕೆ ಒಮ್ಮೆಯಾದರೂ ಬೆಳಗಾವಿಯಲ್ಲಿ ನಡೆಸಲೇಬೇಕು. ನಾವು ಯಾವಾಗ್ಲು ಕನಿಷ್ಠ ಎರಡು ವಾರ ನಡೆಸುತ್ತಿದ್ದೆವು ಎಂದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ಮಾತನಾಡುವುದು ಉದ್ಧಟತನ. ಅವರು ಬೇಜವಾಬ್ದಾರಿತನದಿಂದ ಮಾತನಾಡುತ್ತಾರೆ. ಮಹಾಜನ ವರದಿ ಅಂತಿಮ. ಈಗ ಗಡಿ ಸಮಸ್ಯೆಯೇ.ಇಲ್ಲ. ಅವರು ತಮ್ಮ ಅಸ್ತಿತ್ವಕ್ಕಾಗಿ ಮಾತನಾಡುತ್ತಾರೆ..ಅವರ ಉದ್ಧಟತನ ಸಹಿಸುವುದಿಲ್ಲ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

'ಉಪ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿ.ಹಾಕುತ್ತೇವೆ.ಆತ್ಮಸಾಕ್ಷಿಯಾಗಿ ಮತ ಹಾಕುತ್ತಾರೆ ಎನ್ನುವ ವಿಶ್ವಾಸ. ಸೋಲು ಗೆಲುವು ಮುಖ್ಯವಲ್ಲ. ಜೆಡಿಎಸ್ ನವರು ಜಾತ್ಯತೀತ ಪಕ್ಷ ಎಂದು ಹೇಳುತ್ತಾರೆ.ಸಿದ್ದರಾಮಯ್ಯ ಜೆಡಿಎಸ್ ಅನ್ನು.ಬಿಜೆಪಿಯ ಬಿ.ಟೀಂ ಅಂತ.ರಾಹುಲ್ ಗಾಂಧಿ.ಕಡೆಯಿಂದ ಹೇಳಿಸಿದ್ದರು ಅಂತ ಆರೋಪಿಸಿದ್ದರು. ಈಗ ಜೆಡಿಎಸ್ ಏನು ಅಂತ. ಎಲ್ಲರಿಗೂ ಗೊತ್ತಾಗಿದೆ ಎಂದೂ ಟೀಕಿಸಿದರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.