ಬಳ್ಳಾರಿ: ಕೋವಿಡ್-19 ನಿಯಂತ್ರಣ ಸಲುವಾಗಿ ಜಾರಿಗೆ ತಂದಿರುವ ಲಾಕ್‌ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದರು.
ನಗರದಲ್ಲಿ ಭಾನುವಾರ ಸಂಜೆ ತುರ್ತು ಪತ್ರಿಕಾ ಗೋಷ್ಠಿ ನಡೆಸಿದ ಅವರು, ತಾರಾನಗರ ಪಂಚಾಯ್ತಿ ಸದಸ್ಯ ಮಂಜುನಾಥ್, ಅಲ್ತಾಫ್ ಬಂಧಿತರು. ಪರಾರಿಯಾಗಿರುವ ನಿಂಗಪ್ಪ, ಗಣೇಶ್ ಅವರನ್ನು ಬಂಧಿಸಲಾಗುವುದು ಎಂದರು.
‘ಇಡೀ ದೇಶವೇ ಲಾಕ್‌ನ್ ಆಗಿದ್ದರೂ ಆರೋಪಿಗಳು ಸಂಡೂರು ತಾಲ್ಲೂಕಿನ ತಾರಾನಗರ ಚೆಕ್ ಪೋಸ್ಟ್ ಬಸ್ ನಿಲ್ದಾಣದ ಬಳಿ ಗುಂಪುಗೂಡಿದ್ದರು. ಹಾಗೆ ಮಾಡಬಾರದು ಎಂದು ಸೂಚಿಸಿದ ಪೊಲೀಸರನ್ನು ನಿಂದಿಸಿ ಹಲ್ಲೆ ನಡೆಸಿದರು. ಘಟನೆಯನ್ನು ಚಿತ್ರೀಕರಿಸುತ್ತಿದ್ದ ಕ್ಯಾಮರಾವನ್ನು ಜಖಂಗೊಳಿಸಿದರು’ ಎಂದು ಅವರು ತಿಳಿಸಿದರು.
117 ವಾಹನ ವಶ: ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದವರ 117 ವಾಹನಗಳನ್ನು ವಶಪಡಿಸಿಕೊಂಡಿದ್ದು, ಲಾಕ್ ಡೌನ್ ಅವಧಿ ಮುಗಿಯುವವರೆಗೂ ವಾಪಸ್ ನೀಡುವುದಿಲ್ಲ ಎಂದು ಬಾಬಾ ಹೇಳಿದರು.
ಮರಿಯಮ್ಮನಹಳ್ಳಿ ಹೋಬಳಿಯ ಗೊಲ್ಲರಹಳ್ಳಿಯಲ್ಲಿ ಭಾನುವಾರ ಕಾಳಿಕಾದೇವಿ ರಥೋತ್ಸವ ನಡೆಸಿದ. 15 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.