ADVERTISEMENT

ಬೆಂಗಳೂರು–ಪುಣೆ ನಡುವೆ ‘ಹಸಿರು ಹೆದ್ದಾರಿ’

ಹೆದ್ದಾರಿ ಕಾಮಗಾರಿ: ₹2150 ಕೋಟಿಯಿಂದ 3990 ಕೋಟಿಗೆ ಏರಿಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 19:56 IST
Last Updated 10 ಡಿಸೆಂಬರ್ 2019, 19:56 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ   

ಬೆಂಗಳೂರು: ಬೆಂಗಳೂರು– ಪುಣೆ ನಡುವೆ ‘ಹಸಿರು ಹೆದ್ದಾರಿ’ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಮಂಗಳವಾರದಿಂದ ಆರಂಭವಾದ ‘ಎಕ್ಸ್‌ಕಾನ್‌’ಗೆ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿ 22‘ಹಸಿರು ಹೆದ್ದಾರಿ’ಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಬೆಂಗಳೂರು– ಪುಣೆ ನಡುವಿನ ಹೆದ್ದಾರಿಯನ್ನೂ ಸೇರ್ಪಡೆ ಮಾಡಲಾಗಿದೆ. 600 ಕಿ.ಮೀ ಉದ್ದದ ಪುಣೆ ರಸ್ತೆಯನ್ನು ₹50 ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದೇ ಮಾದರಿಯಲ್ಲಿ ಮುಂಬೈ– ದೆಹಲಿ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದ್ದು, ಈ ಕೆಲಸ ಪೂರ್ಣಗೊಂಡರೆ ಈ ಎರಡು ನಗರಗಳ ನಡುವಿನ ಅಂತರ 250 ಕಿ.ಮೀ ಕಡಿಮೆ ಆಗಲಿದೆ ಎಂದು ವಿವರಿಸಿದರು.

ADVERTISEMENT

ಹೆದ್ದಾರಿ ಕಾಮಗಾರಿ ಪೂರ್ಣಗೊಂಡರೆ ಮುಂಬೈನಿಂದ ದೆಹಲಿಯನ್ನು 12.30 ಗಂಟೆಗಳಲ್ಲಿ ತಲುಪಬಹುದು. ಬೆಂಗಳೂರು– ಪುಣೆ– ದೆಹಲಿ ಸಂಚಾರವೂ ಸರಳವಾಗಲಿದೆ ಎಂದರು.

ಅನುದಾನ ಹೆಚ್ಚಳ: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯಗಳಿಗೆ ವರ್ಷಕ್ಕೆ ₹2150 ಕೋಟಿ ನಿಗದಿಪಡಿಸಿದ್ದು, ಈ ಮೊತ್ತವನ್ನು ₹3990 ಕೋಟಿಗೆ ಹೆಚ್ಚಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಹೆದ್ದಾರಿಗಳ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.