ADVERTISEMENT

ಹಂಪಿಯಲ್ಲಿ ಕೆಡವಿದ್ದು ಕಲ್ಲುಗಂಬದ ಪ್ರತಿಕೃತಿಯೇ?

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 17:10 IST
Last Updated 3 ಫೆಬ್ರುವರಿ 2019, 17:10 IST
   

ಬೆಂಗಳೂರು:ಹಂಪಿ ಗಜಶಾಲೆ ಹಿಂಭಾಗದ ವಿಷ್ಣು ದೇವಾಲಯ ಮಂಟಪದ ಕಲ್ಲುಗಂಬಗಳನ್ನು ಯುವಕರು ಬೀಳಿಸುತ್ತಿರುವ ವಿಡಿಯೊ ಈಚೆಗೆ ವೈರಲ್ ಆಗಿತ್ತು. ಆದರೆ, ಯುವಕರು ಕೆಡವಿದ್ದಾರೆ ಎನ್ನಲಾಗಿರುವ ಕಲ್ಲುಗಂಬಗಳು ಕೇವಲ ಪ್ರತಿಕೃತಿಗಳೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದೆ.

ಈ ಕುರಿತು ಐಎಎಸ್‌ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಅವರು ಮಾಡಿರುವ ಟ್ವೀಟ್‌ ಅನ್ನು ಉಲ್ಲೇಖಿಸಿ ಗೌತಮ್ ಮಾಚಯ್ಯ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ಹಂಪಿಯಲ್ಲಿ ಕಲ್ಲುಗಂಬಗಳನ್ನು ಕೆಡವಿದವರನ್ನು ಕ್ಷಮಿಸಲಾಗದು. ಆದರೆ ಅಲ್ಲಿ ಕೆಡವಿರುವುದು ನಿಜವಾದ ಕಲ್ಲುಗಂಬಗಳಲ್ಲ. ಪ್ರತಿಕೃತಿಗಳು ಎಂದು ಉಲ್ಲೇಖಿಸಿದ್ದಾರೆ.

ADVERTISEMENT

‘ಡಿಸಿ ಮತ್ತು ಎಸ್‌ಪಿ ಅವರ ಜತೆ ಮಾತನಾಡಿ ಪರಿಶೀಲಿಸಿದ್ದೇನೆ. ಆ ಕಲ್ಲುಗಂಬಗಳು ನಿಜವಾದವುಗಳಲ್ಲ. ಅವು ಭಾರತೀಯ ಪುರಾತತ್ವ ಇಲಾಖೆ ನಿರ್ಮಿಸಿರುವ ಪ್ರತಿಕೃತಿಗಳು. ಈ ಘಟನೆ ವರ್ಷದ ಹಿಂದೆ ನಡೆದಿರುವುದು. ಪೊಲೀಸರು ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಿದ್ದಾರೆ. ಈ ದಿನಗಳಲ್ಲಿ ಎಲ್ಲವನ್ನೂ ವೈಭವೀಕರಿಸುವುದು ಸುಲಭ, ಜನರು ವಾಸ್ತವವನ್ನು ಪರಿಶೀಲಿಸುವುದು ವಿರಳ’ ಎಂದುಟ್ವಿಟರ್‌ನಲ್ಲಿ ಕಿರಣ್ ಶಾ ಎಂಬುವವರಿಗೆ ನೀಡಿದ ಪ್ರತಿಕ್ರಿಯೆಯ ಪೋಸ್ಟ್‌ನಲ್ಲಿಮಣಿವಣ್ಣನ್ ಉಲ್ಲೇಖಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.