ADVERTISEMENT

ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ: ₹22ಕ್ಕೆ ರಾಷ್ಟ್ರಧ್ವಜ ಮಾರಾಟ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 22:30 IST
Last Updated 4 ಆಗಸ್ಟ್ 2022, 22:30 IST
   

ಬೆಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ.13ರಿಂದ 15ರವರೆಗೆ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ (ಹರ್ ಘರ್‌ ತಿರಂಗ) ಹಾರಿಸಲು, ಧ್ವಜಕ್ಕೆ ₹ 22ರಂತೆಸಾರ್ವಜನಿಕರಿಗೆ ಮಾರಾಟ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸ್ಥಳೀಯವಾಗಿ ಧ್ವಜಗಳ ಲಭ್ಯತೆ ಕಡಿಮೆ ಇರುವ ಕಾರಣ 50 ಲಕ್ಷ ಧ್ವಜಗಳನ್ನು ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು.ಮನವಿ ಪುರಸ್ಕರಿಸಿದ ಕೇಂದ್ರ ಈಗಾಗಲೇ 25 ಲಕ್ಷ ಧ್ವಜಗಳನ್ನು ಪೂರೈಸಿದೆ. ಧ್ವಜಗಳ ಮಾರಾಟ, ಹಣ ಸಂಗ್ರಹ, ನ್ಯೂನತೆ ಪರಿಶೀಲನೆ, ಪ್ರತ್ಯೇಕಿಸುವುದರ ಜತೆಗೆ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಹೊಣೆಗಾರಿಕೆಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ.

ಮನೆಗಳ ಜತೆಗೆ, ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳ ಎಲ್ಲ ಕಟ್ಟಡಗಳ ಮೇಲೂ ಧ್ವಜ ಹಾರಾಟಕ್ಕೆ ಕ್ರಮ ಕೈಗೊಳ್ಳಬೇಕು. ಮಾರಾಟ ಮಾಡಿದ ಹಣವನ್ನು ‘ಹರ್‌ ಘರ್‌ ತಿರಂಗಾ’ ಖಾತೆಗೆ ಆ.15ರ ನಂತರ ಜಮೆ ಮಾಡಬೇಕು. ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಸರ್ಕಾರ ಆದೇಶದಲ್ಲಿ ಸೂಚಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.