ADVERTISEMENT

309 ಹೆಡ್‌ ಕಾನ್‌ಸ್ಟೆಬಲ್‌ಗಳಿಗೆ ಎಎಸ್‌ಐ ಹುದ್ದೆಗೆ ಬಡ್ತಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 20:18 IST
Last Updated 19 ಜೂನ್ 2019, 20:18 IST
   

ಬೆಂಗಳೂರು: ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 309 ಹೆಡ್‌ ಕಾನ್‌ಸ್ಟೆಬಲ್‌ಗಳಿಗೆ ಎಎಸ್‌ಐ ಹುದ್ದೆಗೆ ಬಡ್ತಿ ನೀಡಲಾಗಿದೆ.

ಹೆಡ್‌ ಕಾನ್‌ಸ್ಟೆಬಲ್‌ ಹುದ್ದೆಯಿಂದ ಕೌನ್ಸೆಲಿಂಗ್‌ ಮೂಲಕ ಘಟಕಗಳಲ್ಲಿ ಖಾಲಿ ಇರುವ ಎಎಸ್‌ಐ ಹುದ್ದೆಗಳಿಗೆ ಅನುಗುಣವಾಗಿ ನಿಯುಕ್ತಿಗೊಳಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ (ಆಡಳಿತ) ಸೀಮಂತ್ ಕುಮಾರ್‌ ಸಿಂಗ್‌ ಅದೇಶದಲ್ಲಿ ತಿಳಿಸಿದ್ದಾರೆ.

ಓಓಡಿ ಮೇರೆಗೆ ನಿಯೋಜಿಸಲಾದ ಎಎಸ್‌ಐಗಳು ತಮ್ಮನ್ನು ಎಎಸ್‌ಐ ಆಗಿ ನಿಯುಕ್ತಿಗೊಳಿಸಿರುವ ಠಾಣೆಯಲ್ಲಿ ತಕ್ಷಣ ವರದಿ ಮಾಡಿಕೊಂಡು ಓಓಡಿ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುವಂತೆಯೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.