ADVERTISEMENT

ಕುಮಾರಸ್ವಾಮಿ ಸಿಎಂ ಆಗಿ ಎಷ್ಟು ನೋವು ತಿಂದಿದ್ದಾರೆ ಎಂಬುದು ಗೊತ್ತಿದೆ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 11:47 IST
Last Updated 27 ಜುಲೈ 2019, 11:47 IST
   

ಬೆಂಗಳೂರು:‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಎಷ್ಟು ನೋವು ತಿಂದಿದ್ದಾರೆ, ಜೆಪಿ ಭವನದಲ್ಲಿ 15 ನಿಮಿಷ ಅತ್ತಿದ್ದಾರೆ, ಎಷ್ಟು ಕಷ್ಟ ಪಟ್ಟಿದ್ದಾರೆ ಎಲ್ಲಾ ಗೊತ್ತಿದೆ. ಸರ್ಕಾರ ಹೋದ್ರು ಚಿಂತೆಯಿಲ್ಲ. ಪಕ್ಷ ಸಂಘಟನೆ ಮಾಡ್ತೀನಿ. ಸರ್ಕಾರ ಹೋಯ್ತು ಏನೂ ಮಾಡೋಕೆ ಆಗೊಲ್ಲ’ ಎಂದುಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದರು.

ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಬೆಂಗಳೂರು ಲೋಕಸಭಾ ಕ್ಷೇತ್ರದ ಸಭೆ ನಡೆಸಿದ ಅವರು, ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು. ಮುಂದುವರಿದು, ‘ಗೋಪಾಲಯ್ಯ ಅವರು ನಮ್ಮ ಮೇಲೆ ಅನೇಕ ತಪ್ಪು ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿ ಬಾಂಬೆಗೆ ಹೋಗಿದ್ದಾರೆ.ಸಭಾಧ್ಯಕ್ಷರು ಈ ವಾರದಲ್ಲಿ ತೀರ್ಮಾನ ಕೊಡುವುದಾಗಿ ತಿಳಿಸಿದ್ದಾರೆ. ನಂತರ ಚುನಾವಣೆ ಇರುತ್ತೋ ಇಲ್ವೋ ಗೊತ್ತಿಲ್ಲ’ ಎಂದರು.

‘ನಾನು ಸೋತ ದಿನದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ.ಜುಲೈ ಕೊನೆ ಅಥವಾ ಆಗಸ್ಟ್ 2ನೇ ವಾರದಲ್ಲಿ ಮಹಿಳಾ ಸಮಾವೇಶ ಮಾಡುತ್ತೇವೆ.ಯಾರು ಏನೇ ಮಾಡಿದ್ರು ಈ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರ ಹೋದ್ರೂ ನಮಗೆ ತೊಂದರೆ ಇಲ್ಲ. ಈ ಪಕ್ಷ ಉಳಿಸುವ ಕೆಲಸ ಮಾಡ್ತೀನಿ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಯಾವುದೇ ದ್ವೇಷ ಇಲ್ಲದೆ ಕೆಲಸ ಮಾಡುತ್ತೇನೆ ಎಂದಿರುವ ಯಡಿಯೂರಪ್ಪ ಹೇಳಿಕೆಯನ್ನು ಸ್ವಾಗತಿಸಿದ ಅವರು, ‘ರಾಜ್ಯಕ್ಕೆ ಒಳ್ಳೆಯದು ಮಾಡಿದ್ರೆ ನಮ್ಮ ಸಹಕಾರ ಇರುತ್ತೆ.ಪರಿಣಾಮಕಾರಿ ವಿರೋಧ ಪಕ್ಷವಾಗಿ ಕೆಲಸ ಮಾಡಲು ನಾನು ಸೂಚನೆ ನೀಡಿದ್ದೇನೆ.ಕುಮಾರಸ್ವಾಮಿಗೆ ಶೇ. 20 ಮತ ನೀಡಿದ ಮತದಾರರು ಇದ್ದಾರೆ.7ನೇ ತಾರೀಖು ಪ್ಯಾಲೇಸ್ ಮೈದಾನದಲ್ಲಿಕಾರ್ಯಕರ್ತರ ಸಮಾವೇಶ ಮಾಡ್ತೀನಿ.30 ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡ್ತೀನಿ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದೇವೇಗೌಡ, ಆಬಗ್ಗೆ ಈಗಲೇ ಚರ್ಚೆ ಯಾಕೆ? ಮುಂದೆ ನೋಡೋಣ.ಫೈನಾನ್ಸ್‌ ಬಿಲ್‌ಗೆ ಎಲ್ಲರೂ ಸರ್ವಾನುಮತದಿಂದ ಒಪ್ಪಿದ್ರೆ ನಮ್ಮ ಬೆಂಬಲವೂ ಇರುತ್ತೆ.ಎಲ್ಲಾ ವಿಷಯಕ್ಕೂ ಸುಮ್ಮನೆ ವಿರೋಧ ಮಾಡೋದಿಲ್ಲಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.