ADVERTISEMENT

ಕೊಡಗಿನಲ್ಲಿ ಭಾರೀ ಮಳೆ | ಮಡಿಕೇರಿ–ಮಂಗಳೂರು ಹೆದ್ದಾರಿ ಕುಸಿಯುವ ಆತಂಕ  

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 13:27 IST
Last Updated 7 ಆಗಸ್ಟ್ 2019, 13:27 IST
   

ಮಡಿಕೇರಿ: ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ತಾಳತ್ತಮನೆ ತಿರುವಿನಲ್ಲಿ ಹೆದ್ದಾರಿ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಕಳೆದ ವರ್ಷ ಕುಸಿದಿದ್ದ ಸ್ಥಳದಲ್ಲೇ ಹೆದ್ದಾರಿ ಕುಸಿಯುತ್ತಿದೆ.

ಎಂ–ಸ್ಯಾಂಡ್ ಅಳವಡಿಸಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿತ್ತು. ಮಳೆಯ ರಭಸಕ್ಕೆ ತಳಭಾಗದ ಮರಳಿನ ಚೀಲಗಳು ಕೊಚ್ಚಿಹೋಗಿವೆ. ಸದ್ಯಕ್ಕೆ ಒಂದು ಬದಿಯಲ್ಲಿ ವಾಹನಗಳು ಸಂಪಾಜೆ, ಸುಳ್ಯದ ಮೂಲಕ ದಕ್ಷಿಣ ಕನ್ನಡಕ್ಕೆ ಸಂಚರಿಸುತ್ತಿವೆ.

ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲಕ್ಷೀಪ್ರಿಯಾ ಅವರು ಪ್ರವಾಹಕ್ಕೆ ತುತ್ತಾಗಿರುವ ಐಕೊಳ, ನೆಲ್ಯಹುದಿಕೇರಿ ಹಾಗೂ ಕರಡಿಗೋಡು ಗ್ರಾಮಗಳಿಗೆ ಭೇಟಿ ಪರಿಸ್ಥಿತಿ ಅವಲೋಕಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.