ADVERTISEMENT

ನದಿಗಳ ಆರ್ಭಟಕ್ಕೆ ನಲುಗಿದ ಜನರು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 19:20 IST
Last Updated 20 ನವೆಂಬರ್ 2021, 19:20 IST
ತುಂಬಿ ಹರಿಯುತ್ತಿರುವ ಪಿನಾಕಿನಿ ನದಿಯಿಂದ ಭರ್ತಿಯಾದ ಕಿಂಡಿ ಅಣೆಕಟ್ಟು -– ಪ್ರಜಾವಾಣಿ ಚಿತ್ರ
ತುಂಬಿ ಹರಿಯುತ್ತಿರುವ ಪಿನಾಕಿನಿ ನದಿಯಿಂದ ಭರ್ತಿಯಾದ ಕಿಂಡಿ ಅಣೆಕಟ್ಟು -– ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಯಲುಸೀಮೆಯ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಶನಿವಾರವೂ ಮಳೆಯ ಆರ್ಭಟ ಮುಂದುವರೆದಿದೆ. ದಶಕಗಳ ನಂತರ ಬಹುತೇಕ ಕೆರೆ, ಕುಂಟೆಗಳು ಕೋಡಿ ಬಿದ್ದಿವೆ.ಚಿಕ್ಕಪುಟ್ಟ ನದಿ, ಹಳ್ಳಗಳೂ ಭೋರ್ಗೆರೆಯುತ್ತಿದ್ದು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಿರು ಜಲಾಶಯಗಳು ಭರ್ತಿ ಆಗಿವೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ರಾಯರೇಕಲಹಳ್ಳಿಯ ಬಳಿಯ ಉತ್ತರಪಿನಾಕಿನಿ ನದಿಯಲ್ಲಿ ಶುಕ್ರವಾರ ರಾತ್ರಿ ಕುಂಬಿರಾಜು (42) ಎಂಬ ವ್ಯಕ್ತಿ ಕೊಚ್ಚಿ ಹೋಗಿದ್ದಾರೆ.ಉತ್ತರ ಪಿನಾಕಿನ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ನದಿ ಅಂಚಿನಲ್ಲಿದ್ದ ಸಾವಿರಾರು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಮೇಳ್ಯಾ, ಕಲ್ಲೂಡಿ ಕೆರೆಗಳು ಒಡೆದಿದ್ದು, ಜಿಲ್ಲೆಯಲ್ಲಿ 436 ಮನೆಗಳಿಗೆ ಹಾನಿಯಾಗಿದೆ. ಬಾಗೇಪಲ್ಲಿ ತಾಲ್ಲೂಕಿನ ಯರ್ರಪೆಂಟ್ಲ ಗ್ರಾಮದಲ್ಲಿ ಮನೆ ಕುಸಿದು ಆರು ಕುರಿ ಮತ್ತು ನಾಲ್ಕು ಮೇಕೆಗಳು ಮೃತಪಟ್ಟಿವೆ. ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ಹಾದು ಹೋಗುವ ರಾಜಕಾಲುವೆಯಲ್ಲಿ ನೀರು ಹರಿಯುತ್ತಿದ್ದು ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ.ಜಿಲ್ಲೆಯಲ್ಲಿ 31 ಕಡೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.