ADVERTISEMENT

ರಾಜ್ಯದಲ್ಲಿ ಮುಂದುವರಿದ ಮಳೆ ಅಬ್ಬರ; ಸಿಡಿಲು ಬಡಿದು ಮಹಿಳೆ ಸಾವು

ಸಿಡಿಲು ಬಡಿದು ಮಹಿಳೆ ಸಾವು * ಪ್ರವಾಹದಲ್ಲಿ ಕೊಚ್ಚಿ ಹೋದ ಟ್ರಕ್ ಚಾಲಕ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 21:00 IST
Last Updated 3 ಆಗಸ್ಟ್ 2022, 21:00 IST
ಸಿರುಗುಪ್ಪ ತಾಲ್ಲೂಕು ರಾರಾವಿ ಬಳಿ ವೇದಾವತಿ ನದಿಯಲ್ಲಿ ಪಲ್ಟಿಯಾದ ಲಾರಿಯ ಚಾಲಕರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ.
ಸಿರುಗುಪ್ಪ ತಾಲ್ಲೂಕು ರಾರಾವಿ ಬಳಿ ವೇದಾವತಿ ನದಿಯಲ್ಲಿ ಪಲ್ಟಿಯಾದ ಲಾರಿಯ ಚಾಲಕರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ.   

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಬುಧವಾರವೂ ಮುಂದುವರಿದಿದೆ. ಕೆಲವೆಡೆ ಸೇತುವೆಗಳ ಮೇಲೆ ನೀರು ಹರಿದ ಪರಿಣಾಮ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಹಲವು ಗ್ರಾಮಗಳು ಜಲಾವೃತವಾಗಿವೆ.

ವಿಜಯಪುರ ಜಿಲ್ಲೆಯ ಹುಣಶ್ಯಾಳ ಗ್ರಾಮದಲ್ಲಿ ರೈತ ಮಹಿಳೆ ಜೈನಾಬಿ ನಜೀರ್‌ ಅಹ್ಮದ್‌ ಸಿಪಾಯಿ (55) ಎಂಬುವವರು ಹೊಲದಲ್ಲಿ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ರಾರಾವಿ ಬಳಿಯ ವೇದಾವತಿ ನದಿಯಲ್ಲಿ ಬುಧವಾರ ಬೆಳಗಿನ ಜಾವ ಪ್ರವಾಹದಲ್ಲಿ ಸಿಕ್ಕಿದ ಟ್ರಕ್‌ ಪಲ್ಟಿಯಾಗಿ, ಅದರಲ್ಲಿದ್ದ ಇಬ್ಬರು ಚಾಲಕರ ಪೈಕಿ ಹುಸೇನಿ (25) ಎಂಬುವವರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಮತ್ತೊಬ್ಬ ಚಾಲಕ ಅಹಮ್ಮದ್‌ (55) ಎಂಬಾತನನ್ನು ಅಗ್ನಿ
ಶಾಮಕ ದಳದ ಸಿಬ್ಬಂದಿ ಹಾಗೂ ಸುರಪುರದ ಎಸ್‌ಡಿಆರ್‌ಎಫ್‌ ತಂಡ ರಕ್ಷಣೆ ಮಾಡಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಳೆ ಇಳಿಮುಖವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.