ಬೆಂಗಳೂರು: ಸರಣಿ ಕಳ್ಳತನ ಹಾಗೂ ಒಂಟಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ದಂಡುಪಾಳ್ಯ ಕೃಷ್ಣ ಮತ್ತು ದಂಡುಪಾಳ್ಯ ದೊಡ್ಡಹನುಮ ಅವರಿಗೆ ಅವರ ಸಂಬಂಧಿಕರ ಮರಣೋತ್ತರ ಕ್ರಿಯೆಯಲ್ಲಿ ಭಾಗವಹಿಸಲು ಅನುವಾಗುವಂತೆ ಹೈಕೋರ್ಟ್ 15 ದಿನಗಳ ಪೆರೋಲ್ ಮಂಜೂರು ಮಾಡಿದೆ.
ಈ ಸಂಬಂಧ ಇಬ್ಬರೂ ಅಪರಾಧಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಷರತ್ತುಬದ್ಧ ಪೆರೋಲ್ ಮಂಜೂರು ಮಾಡಿ ಅದೇಶಿಸಿತು.
ಸರ್ಕಾರದ ಪರ ವಕೀಲರು, ‘ಪೆರೋಲ್ ಮೇಲೆ ತೆರಳಲಿರುವ ಅಪರಾಧಿಗಳಿಗೆ ಪೊಲೀಸರ ಎಸ್ಕಾರ್ಟ್ ಒದಗಿಸಲು ಆದೇಶಿಬೇಕು’ ಎಂದು ಕೋರಿದರು. ಆದರೆ, ಇದಕ್ಕೆ ಅರ್ಜಿದಾರರ ಪರ ವಕೀಲ ವಕೀಲ ಸಿರಾಜುದ್ದೀನ್ ಆಕ್ಷೇಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.